Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Achievments in 80 years

ಶ್ರೀವಿಶ್ವೇಶತೀರ್ಥ ಶ್ರೀಪಾದರ 80 ವರ್ಷದ ಸಾಧನೆಗಳ ವಿಹಂಗಮ ನೋಟ

ಶ್ರೀವಿಶ್ವೇಶತೀರ್ಥ ಶ್ರೀಪಾದರ ಅರವತ್ತು ವರ್ಷಗಳ ಸಾಧನೆಗಳ ಪ್ರಮುಖ ಅಂಶ ಗಳನ್ನು ಆರು ಶೀರ್ಷಿಕೆಗಳಲ್ಲಿ ಸಂಗ್ರಹಿಸಿಕೊಡಲಾಗಿದೆ. ಜೊತೆಗೆ, ಅವರ ಪ್ರತಿಭೆ ಮತ್ತು ಅವರ ಕರ್ತೃತ್ವ ಶಕ್ತಿಗೆ ದೊರೆತ ಸಾಮಾಜಿಕ ಪುರುಸ್ಕಾರಗಳ ವಿವರ ಗಳನ್ನೂ ನೀಡಲಾಗಿದೆ. ಅಲ್ಲದೆ, ಆ ಸಂದರ್ಭಗಳಲ್ಲಿ ಪ್ರಸಾರವಾದ ಪತ್ರಿಕೆಯ ವರದಿ ಗಳು, ಗಣ್ಯರ ಹೇಳಿಕೆಗಳು ಹಾಗೂ ದೊರೆತ ಕೆಲವು ಭಾವಚಿತ್ರಗಳು ಇವುಗಳ ಆಧಾರಗಳನ್ನು ನೀಡಲಾಗಿದೆ. ಕೆಲವೆಡೆ ಶ್ರೀಗಳವರ ಉದ್ದೇಶವನ್ನು ಸ್ಪಷ್ಟಪಡಿಸುವ ದಷ್ಟಿಯಿಂದ ಪತ್ರಿಕೆಗಳಲ್ಲಿ ಬಂದ ಅವರ ಹೇಳಿಕೆಗಳನ್ನೇ  ನೀಡಲಾಗಿದೆ.

ಸಂಪಾದಕ

1. ಸಾಮಾಜಿಕ ಕಾರ್ಯಗಳು

ಬ್ರಾಹ್ಮಣಃ ಸಮದೃಕ್ ಶಾಂತಃ ದೀನಾನಾಂ ಸಮುಪೇಕ್ಷಕಃ|

ಸ್ವವತೇ ಬ್ರಹ್ಮ ತಸ್ಯಾಪಿ ಭಿನ್ನಭಾಂಡಾತ್ ಪಯೋ ಯಥಾ || (ಭಾಗವತ)

‘’ಸಮದೃಷ್ಟಿಯುಳ್ಳ ಏಕಾಂತದಲ್ಲಿ ತಪೋನಿರತನಾದ ಬ್ರಹ್ಮeನಿಯೂ ದುಃಖ ಕ್ಕೊಳಗಾದ ಮುಗಟಛಿ ಜನರನ್ನು ಉಪೇಕ್ಷಿಸಬಾರದು.ಹಾಗೆ ಮಾಡಿದರೆ ತೂತು ಮಡಿಕೆಯಿಂದ ನೀರು ಸೋರಿದಂತೆ ಅವನ ತಪಸ್ಸು ಸೋರಿಹೋಗುತ್ತದೆ.”.

ಇದು ವೇನನ ದುಷ್ಟರಾಜ್ಯಭಾರದಿಂದ ನೊಂದ ಪ್ರಜೆಗಳನ್ನು ನೋಡಿ ಋಷಿಗಳು ಹೇಳಿದ ಮಾತು. ಮಠಗಳಿಗೇಕೇ ಈ ಕಾರ್ಯ? ‘’ಇಂದು ಕ್ರೈಸ್ತ ಮಿಶನರಿಗಳು ನಡೆಸುವಂತಹ ವ್ಯಾ ಪಕ ಸಾಮಾಜಿಕ ಸೇವಾಕಾರ್ಯವನ್ನು ನೋಡಿದಾಗ ನಮ್ಮ ಹಿಂದೂ ಪೀಠಗಳಿಂದ ನಡೆದ ಕಾರ್ಯ ಅತ್ಯಲ್ಪ. ಅದನ್ನು ಸ್ವಲ್ಪಮಟ್ಟಿಗಾದರೂ ಮಾಡದೇ ಹೋದರೆ ಮಠಗಳು ಸಮಾಜದಿಂದ ಸಂಪೂರ್ಣವಾಗಿ ಪ್ರತ್ಯೇಕವಾದಾವು. ಇದರಿಂದ ಸಮಾಜ ದಲ್ಲಿ ಧಾರ್ಮಿಕ ಪ್ರಭಾವವನ್ನು ಬೀರಲು ಅವಕಾಶವಾಗುತ್ತದೆ. ಬರೀ ಪೂಜೆ ಉಪಾಸನೆಗಳಿಗೆ ಮಾತ್ರ ಮಠಗಳನ್ನು ಸ್ಥಾಪಿಸಿದ್ದಲ್ಲ. ಮಠಾಪತಿಗಳೂ ತಮ್ಮ ಸಾಧನೆ, ಸನ್ನ್ಯಾಸೋಚಿತ ಕರ್ತವ್ಯಗಳು ಇವಕ್ಕೆ ಚ್ಯುತಿಯಾಗದಂತೆ ಸಾಮಾಜಿಕ ಸೇವೆಯನ್ನು ಹೊಂದಿಸಿಕೊಂಡು ಹೋಗಬೇಕು” (ಶ್ರೀಪೇಜಾವರ ಶ್ರೀಗಳು ತತ್ವವಾದ ಉಪಾಯನ- 1984)

1. ಬಿಹಾರದ ಕ್ಷಾಮ ಪರಿಸ್ಥಿತಿ (ಜುಲೈ 1967 ತತ್ವವಾದ-ಹಿಂದಿ ಆವೃತ್ತಿ) ‘’ಬರಗಾಲದ ಭೀಕರ ಹೊಡೆತಕ್ಕೆ ಸಿಕ್ಕ ಬಿಹಾರದ ಜನ ಅನ್ನ, ಬಟ್ಟೆ, ಔಷಗಳಿಲ್ಲ ದೆ ಉಪವಾಸ, ರೋಗರುಜಿನಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ದೇಹದ ಒಂದು ಭಾಗದಲ್ಲಿ ಗಾಯವಾದರೂ ನಮ್ಮ ಎಲ್ಲ ಅಂಗಗಳೂ ಅದರ ಬಗ್ಗೆ ಎಚ್ಚರವಹಿಸುತ್ತವೆ. ಅದರಂತೆ ದೇಶದ ಯಾವುದೇ ಭಾಗದಲ್ಲಿ ತೊಂದರೆಯಾದರೂ ಇಡೀ ದೇಶವೇ ಎಚ್ಚತ್ತು ಅದರ ಪರಿಹಾರಕ್ಕೆ ಪ್ರಯತ್ನಿಸಬೇಕಾದುದು ಕರ್ತವ್ಯ. ದೇವರ ಕೃಪೆಯನ್ನು ಬಯಸುವ ಅವಕಾಶ, ಸೂರ್ಯಚಂದ್ರರ ಗ್ರಹಣಕಾಲದಂತೆ ಇಂ ತಹ ಸಂದರ್ಭವೂ ಒಂದು ಪುಣ್ಯಕರ. ದುಃಖಪೀಡಿತರ ಸೇವೆಮಾಡಿ ಆ ಮೂಲಕ ಸರ್ವಾಂತರ್ಯಾಮಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುವ ಒಂದು ದೊಡ್ಡ ಸದವಕಾಶ”

(ಸಹಕಾರಕ್ಕಾಗಿ ಶ್ರೀವಿಶ್ವೇಶತೀರ್ಥರ ಘೋಷಣೆ)

ಬಿಹಾರದಲ್ಲಿ ವೈದ್ಯಕೀಯ ಚಿಕಿತ್ಸಾ ಕೇಂದ್ರ- ತತ್ವವಾದ 2-9-1967: “ಬಿಹಾ ರ ರಾಜ್ಯದ ಗಯಾ ಜಿಲ್ಲೆಯ ‘ನವಾದಾ’ ಗ್ರಾಮದಲ್ಲಿ ಉಡುಪಿ ಪೇಜಾವರ ಮಠ ಒಂದು ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿದೆ. ಬೆಂಗಳೂರಿನ ವೈದ್ಯ ಶ್ರೀಬಿ.ಕೆ. ಸುಬ್ಬರಾಯರು ಈ ಚಿಕಿತ್ಸಾಲಯದ ನೇತೃತ್ವ ವಹಿಸಿದ್ದಾರೆ. ಒಂದು ಜೀಪಿನಲ್ಲಿ ಸುತ್ತ ಮುತ್ತಲ ಹಳ್ಳಿಗಳಿಗೆ ತುರ್ತು ಔಷಗಳನ್ನು ಪೂರೈಸಲಾಗುತ್ತಿದೆ. ಬರಗಾಲ ಮತ್ತು ವಿಷಮ ಆಹಾರದ ಸೇವನೆಯಿಂದ ಅಲ್ಲಿ ಅಸಂಖ್ಯ ಬಡವರು ಭಯಾನಕ ರೋಗಕ್ಕೆ ತುತ್ತಾಗಿದ್ದಾರೆ. ನಾವು ನೀಡುವ

ಸಹಾಯ “ಊಂಟ್ ಕೇ ಮುಹ್ ಮೇ ಜೀರೇಕೇ ಸಮಾನ್”.

2. ಬಾಗಲಕೋಟೆಯ ಬರಗಾಲ: ಕ್ರಿ.ಶ.1986. ಶ್ರೀವಿಶ್ವೇಶತೀರ್ಥರು ಗದಗಿನಿಂ ದ ಬಾಗಲಕೋಟೆಯ ದಾರಿಯಲ್ಲಿದ್ದರು. ಬಿಸಿಲಿನ ಝಳ. ಎಲ್ಲಿ ನೋಡಿದರೂ ನೀರಿನ ಸುಳಿವೇ ಇಲ್ಲ. ಹಳ್ಳಿಯ ಬಡವನೊಬ್ಬನನ್ನು ಕೇಳಿದರು. ಅವನು ಕೊಟ್ಟ ಉತ್ತರ – ‘’ಇನ್ನೇನ್ರೀ ಅಪ್ಪಾ ಗಂಗಾಳ, ಚರಿಗೆ ಮಾರೂದೊಂದು ಉಳಿದೈತ್ರಿ”. ಶ್ರೀಗಳವರ ಹೊಟ್ಟೆ ಚುರ್ ಎಂದಿತು. ಆಗಲೇ ಮನಸ್ಸಿನಲ್ಲಿ ನಿರ್ಧಾರ ಮೂಡಿತ್ತು. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ನೆರವಾಗಿ ನಿಂತರುಲ ಕಾರ ಡಗಿಯಲ್ಲಿ ಕೆರೆಯ ಹೂಳೆತ್ತುವ ಕಾರ್ಯ. ದಿನಕ್ಕೆ ಹದಿನೈದು ರೂಪಾಯಿ ಕೈಗೆ ಕೂಲಿ. ಅಷ್ಟೇ ಉಳಿತಾಯ. ಅದಕ್ಕೆ ಮತ್ತಷ್ಟು ಸೇರಿಸಿ ರೈತರಿಗೆ ಬೇಕಾದ ಕುರಿ, ಆಕಳು ಕೊಡುಗೆ. ಆಗ (1985) ಶ್ರೀಗಳ ಪರ್ಯಾಯದ ಅವ. ವಿಶ್ವ ಹಿಂದೂ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ಗೋಕೇಂದ್ರಕ್ಕೂ ಶ್ರೀಗಳವರು ಉಡುಪಿಯಲ್ಲಿದ್ದು ಸಾಕಷ್ಟು ಸಹಾಯ ನೀಡಿದ್ದರು. ಪರ್ಯಾಯ ಎದ್ದು ಮೊದ ಲು ಭೇಟಿ ನೀಡಿದ್ದು ಬಾಗಲಕೋಟೆಯ ಕರುವಿನಕೊಪ್ಪ ಗೋಶಾಲೆಗೆ.

“ಗೋರಕ್ಷಣೆ ಒಂದು ಮಹಾಯಜ್ಞ. ಈ ಯಜ್ಞದಿಂದ ಶ್ರೀಕೃಷ್ಣ ಪ್ರೀತನಾಗುತ್ತಾ ನೆ.” ಹೀಗೆಂದು ಶ್ರೀ ವಿದ್ಯಾಮಾನ್ಯರು ಗುಲ್ಬರ್ಗದ ಚಂಚೋಳಿಯಲ್ಲಿ ಶ್ರೀ ಪೇಜಾವರ ಮಠದ ಕ್ಷಾಮ ಸಂತ್ರಸ್ತ ಸಮಿತಿ ಪ್ರಾರಂಬಿಸಿದ ಗೋರಕ್ಷಣಾ ಕೇಂ ದ್ರವನ್ನು ಉದ್ಘಾಟಿಸುತ್ತಾ ಹೇಳಿದರು.(ತತ್ವವಾದ ಏಪ್ರಿಲ್ 1973).

ಸಂತ್ರಸ್ತರಿಗೆ ಪುನರ್ವಸತಿ

1978ರಲ್ಲಿ ಚಂಡಮಾರತಕ್ಕೆ ಬಲಿಯಾದ ಹಂಸಲದೀವಿ ಗ್ರಾಮವನ್ನು ದತ್ತು ಪಡೆ ದು ಅಲ್ಲಿ 150 ಮನೆಗಳ ನಿರ್ಮಾಣ, ಗೋವಿಂದಪುರುದ ಜನ 1995ರಲ್ಲಿ ಭೂಕಂ ಪಕ್ಕೆ ತುತ್ತಾದಾಗ 60 ಮನೆಗಳ ನಿರ್ಮಾಣ ಶ್ರೀಗಳವರ ಸಾಮಾಜಿಕ ಕಳಕಳಿಗೆ ಉತ್ತಮ ನಿದರ್ಶನಗಳು.

‘’ಶ್ರೀವಿಶ್ವೇಶತೀರ್ಥ ಶ್ರೀಪಾದರು ಚಂಡಮಾರುತಕ್ಕೆ ಬಲಿಯಾದ ಆಂಧ್ರದ ದಿವಿ ತಾಲೂಕಿನ ಹಂಸಲದಿವಿಯಲ್ಲಿ 150 ಮನೆಗಳ ನಿರ್ಮಾಣದ ಶಂಕುಸ್ಥಾಪನೆಯನ್ನು 24-1-78 ರಲ್ಲಿ ನೆರವೇರಿಸಿದರು.” (ತತ್ವವಾದ ಫೆಬ್ರವರಿ-78) ಅಂದು ಶ್ರೀಗಳು ನಡೆಸಿದ ಸಾಹಸ: (ಶ್ರೀಗಳವರ ಜೊತೆಗಿದ್ದ ವಿಜಯವಾಡದ ಉದ್ಯ ಮಿ ಮುರಳೀಧರರಾಯರು -ಸಂಗ್ರಹ-ಶ್ರೀನಿವಾಸವರಖೇಡಿ): “ಅಂದು ಕೌಡೂ ರಿನ ವರೆಗೆ ರಸ್ತೆ ಹೇಗೋ ಸರಿ ಇತ್ತು ನಂತರ ಸುಮಾರು ಹತ್ತು ಕಿ.ಮೀ ಅಂತ ರವನ್ನು ರಸ್ತೆ ಇಲ್ಲದುದರಿಂದ, ಶ್ರೀಗಳವರು ನಡೆದೇ ಹೋಗುವುದಾಗಿ ನಿರ್ಧರಿಸಿ ದ್ದರು. ಚಂಡಮಾರುತದ ಮಳೆ ನಿಂತು ದಿನವಾಗಿತ್ತಷ್ಟೆ. ಹೀಗಾಗಿ ನೀರುನಿಂತ ಗದ್ದೆಗಳ ದಂಡೆಯ ಮೇಲೆ ನಡೆಯುವುದು ಸಾಹಸದ ಕೆಲಸ. ಅಂತಹುದರಲ್ಲಿ ಶ್ರೀ ಗಳವರು ವೇಗವಾಗಿ ನಡೆಯುತ್ತಿದ್ದರು. ನಮಗೆ ಅವರನ್ನು ಹಿಂಬಾಲಿಸುವುದೇ ಕಷ್ಟವಾಯಿತು. ದಾರಿ ಯುದ್ದಕ್ಕೂ ಹಸು, ಕರು, ಪ್ರಾಣಿಗಳ ಶವಗಳು. ಸುಟ್ಟ ಮರಗಳು ಒಂದೆರಡು ಕಡೆ ಇನ್ನೂ ಅನಾಥವಾಗಿ ಬಿದ್ದಿದ್ದ ಮನುಷ್ಯರ ದೇಹಗಳು ಇವನ್ನೆಲ್ಲ ನೋಡಿದಾಗ ಚಂಡಮಾರುತದ ಭೀಕರ ಸ್ವರೂಪ ಅರಿವಾಗುತ್ತಿತ್ತು. ಚಂಡಮಾರುತದ ಅನಾಹುತಕ್ಕಿಂತ ಸ್ವಲ್ಪ ದಿನ ಮೊದಲು ಈ ಊರಿಗೆ ಮದುವೆಯಾಗಿ ಬಂದ ಸತ್ಯಮ್ಮ ಇಂದು ಅದೇ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆಗೆ ವಾಸ ವಾಗಿದ್ದಾಳೆ. ಶ್ರೀಗಳು ಮಾಡಿದ ಉಪಕಾರವನ್ನು ಸದಾ ನೆನೆಯುವ ಆಕೆ ಸ್ವಲ್ಪ ಶಿಥಿಲವಾದ ಮೇಲ್ಚಾವಣೆ ತೋರಿಸುತ್ತಾ- “ಇಷ್ಟು ದಿನ ನಡೆಯಿತು. ಮತ್ತೆ ಸರಿ ಮಾಡಲು ಸ್ವಾಮಿಗಳೇ ಬರಬೇಕಷ್ಟೆ”ಎನ್ನುತ್ತಾಳೆ.

ಪ್ರತ್ಯಕ್ಷ ವರದಿ: ವಿದ್ವಾನ್ ಶ್ರೀನಿವಾಸ ವರಖೇಡಿ

ಹಂಸಲದಿವಿ ಯೋಜನೆಯ ವಿವರ

ಘೋಷಣೆ: “ಜನತಾ ಕಲ್ಯಾಣ ನಿ, ಶ್ರೀಪೇಜಾವರ ಮಠ, ಉಡುಪಿ

ಒಟ್ಟು ಮೊತ್ತ : 12 ಲಕ್ಷ ರೂ.ಗಳು

ಪ್ರಮುಖ ದಾನಿಗಳು: ಇಂಡಿಯನ್ ಎಕ್ಸ್‌ಪ್ರೆಸ್ 5 ಲಕ್ಷರೂ.ಗಳು

ಬೆಂಗಳೂರಿನ ವ್ಯಾಪಾರಿಗಳೊಬ್ಬರು 1 ಲಕ್ಷ ರೂ.

ಒಟ್ಟು ಮನೆಗಳು: 150

ಫಲಾನುಭವಿಗಳು: ಯಾದವ ಜನಾಂಗಕ್ಕೆ ಸೇರಿದ ಬಡವರು

ಕಾಲಾವಾ : 1977 ರಿಂದ 1979

ಸಹಕಾರ: ವಿಶ್ವ ಹಿಂದೂ ಪರಿಷತ್, ವಿಜಯವಾಡ

ಮಾರ್ಗ: ಆಂಧ್ರದ ವಿಜಯವಾಡದದಿಂದ 110 ಕಿ.ಮೀ. ಕೂಚುಪುಡಿ ಗ್ರಾಮದಿಂದ 35.ಕಿ.ಮೀ

ಹಂಸಲದಿವಿ ಶಂಕುಸ್ಥಾಪನೆಯ ಶಿಲಾಫಲಕ:

ಶ್ರೀರಸ್ತು ಶುಭಮಸ್ತು ಅವಿಘ್ನಮಸ್ತು

ಪಿಂಗಳನಾಮ ಸಂವತ್ಸರದ ಕಾರ್ತಿಕ ಶುದಟಛಿ ನವಮಿ ಶನಿವಾರ ದಿ.19.11.1977 ನಾಡು ಸಂಭವಿಂಚಿನ ಪೆನುವುಪ್ಪಿನ ಅನಂತರವು ಪುನರುತ್ಥಾನ ನಿಮಿತ್ತಮು ದತ್ತ ಸ್ವೀಕಾರಮು ಚೇಯಬಡಿನ ‘ಹಂಸಲದಿವಿ’ ಕ್ಷೇತ್ರಗ್ರಾಮಮುನ ‘ಜನತಾ ಕಲ್ಯಾ ಣ ನಿ’ ಆರ್ಥಿಕ ಸಹಕಾರಮುತೋ, ಆಂಧ್ರಪ್ರದೇಶ ವಿಶ್ವ ಹಿಂದೂ ಪರಿಷತ್ ನಿರ್ವ ಹಿಂಚಿನ ಶಾಶ್ವತ ಗೃಹ ನಿರ್ಮಾಣ ಪಕಮುನಕು…. ಪಿಂಗಳನಾಮ ಸಂವತ್ಸರದ ಪುಷ್ಯ ಪೂರ್ಣಿಮಾ ಮಂಗಳವಾರ ದಿ.24-1-1978 ಪರ್ವ ಚಿನಮುನ ವಿಶ್ವ ಹಿಂದೂ ಪರಿಷತ್ ಮಹಾನಾಯಕುಲು ಶ್ರೀ ಉಡುಪಿ ಪೇಜಾವರ ಮಠಾಶಲಗು ಶ್ರೀ 108 ಜಗದ್ಗುರು ಶ್ರೀ ವಿಶ್ವೇಶತೀರ್ಥ ಸ್ವಾಮಿ ವಾರಿ ಚೀ ಆಂಧ್ರಪ್ರದೇಶ ವಿದ್ಯಾ ಪುನರಾವಾಸ ಶಾಖಾ ಮಂತ್ರಿ ಶ್ರೀ ಮಂಡಲಿ ವೆಂಕಟಕೃಷ್ಣರಾವ್ ಗಾರಿ ಅಧ್ಯಕ್ಷತನ ಜರಿಗಿನ ಶಂಕುಸ್ಥಾಪನ ಮಹೋತ್ಸವ ಶಿಲಾಫಲಕಮು.

ಗೋವಿಂದಪುರದ ಯೋಜನೆಯ ವಿವರ

ಘೋಷಣೆ: ಶ್ರೀಪೇಜಾವರ ಮಠದ ಜನತಾ ಕಲ್ಯಾಣ ನಿ

ಒಟ್ಟು ಮೊತ್ತ: 18 ಲಕ್ಷ ರೂ.ಗಳು

ಮನೆಗಳು ; 60

ಫಲಾನುಭವಿಗಳು: ತಳವಾರರು ಮತ್ತು ಹರಿಜನರು

ಅವ : 1 ವರ್ಷ 9 ತಿಂಗಳು

ಕಾರ್ಯಕರ್ತರು : ಶ್ರೀ ವಿ.ಎಸ್.ಪಂಚಮುಖಿ, ಡಾ!ಕೆ.ಟಿ. ಜಾಲಿಹಾಳ, ಶ್ರೀ ನರೇಂದ್ರ ಜಹಗೀರ್‌ದಾರ್,

ಯೋಜನೆಯ ಉಪ ಫಲ : ಕಡ್ಡಾಯ ಸಾರಾಯಿ ನಿಷೇಧ ಮತ್ತು ದಿನಚರಿಯಲ್ಲಿ ಪ್ರಾರ್ಥನೆ.

ಒಂದು ಪ್ರತಿಕ್ರಿಯೆ: (ಸಂದರ್ಶನ- ಶ್ರೀನಿವಾಸ ವರಖೇಡಿ) 80 ವರ್ಷ ದಾಟಿದ ಹರಿಜನ ಹಣ್ಣು ಮುದುಕನೋರ್ವ ಶ್ರೀಗಳವರ ಬಗ್ಗೆ ಹೇಳಿದ ಮಾತು- “ಸ್ವಾಮಿಗೋಳ… ಸ್ವರ್ಗದಂತಾ ಮನೀ ಕಟ್ಟಿಸೀದ್ರ. ಆದ್ರ ಇದನ್ನ ನೋಡಿದ್ರ ನನ್ನ ಕಣ್ಣಾಗ ನೀರ ಬರ್‍ತೈತಿ. ಯಾಕಂದ್ರ ಯಪ್ಪಾ! ಈ ಮನ್ಯಾಗ ಇರಾಕ ನಂಗ ದ್ವೈವ ಇಲ್ಲ! ನಾ ಇನ್ನೇನ್ ಭಾಳ ದಿವ್ಸ ಬದುಕೋದಿಲ್ಲ.. ಹುಟ್ಟಿದಾಗಿನಿಂದ ಗುಡಿಸಲ್ಯಾಗ ಅದೇನಿ! ಈಗ್ ಅರಮನೀಗ್ ಬಂದಾಗ ಕಣ್ಮುಚ್ಕೋಳೋ ಹಂಗ ಆಗೇತ್ರೀ…” ಉದ್ಘಾಟನೆಯಂದು ಪಿ.ಜಿ.ಆರ್.ಸಿಂಧ್ಯಾ: (1996) “ಸರಕಾರಕ್ಕೂ ಈ ತೆರನಾದ ಸಹಕಾರವನ್ನು ಸಂತ್ರಸ್ಥರಿಗೆ ನೀಡಲಾಗಿಲ್ಲ. ಶ್ರೀವಿಶ್ವೇಶತೀರ್ಥರ ತಪಶ್ಶಕ್ತಿಯ ವರ ಇದು”

ಹೊಸ ದಿಗಂತ ವಿಶೇಷ ಪುರುವಣಿ- 17-2-99;

ಪ್ರಶ್ನೆ : ಸ್ವಾಮೀಜಿ ತಾವು ಮಠದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ವಿಭಿನ್ನ ದಾರಿಯಲ್ಲಿ ಸಾಗಿದ್ದೀರಿ. ಸಮಾಜಕ್ಕೆ ದೇಶಕ್ಕೆ ಸಮಸ್ಯೆಗಳು, ಸಂಕಷ್ಟಗಳು ಬಂದಾಗಲೆಲ್ಲ ಸ್ಪಂದಿಸಿದ್ದೀರಿ; ಭಾವಿಸಿದ್ದೀರಿ. ಇದರ ಹಿನ್ನೆಲೆ ಏನು? ಪ್ರೇರಣೆ ಯಾವುದು? (ಶಿಕಾರಿಪುರ ಈಶ್ವರಭಟ್ಟ)

ಉತ್ತರ: ನಾವು ಆರಿಸಿಕೊಂಡಿರುವ ದಾರಿ ವಿಭಿನ್ನವಾದುದಲ್ಲ. ಮಧ್ವರೇ ಒಂದೆಡೆ ಹೇಳಿದ್ದಾರೆ- “ಜನರ ಸೇವೆಯೇ ನಾವು ದೇವರಿಗೆ ಕೊಡಬೇಕಾದ ಕಂದಾಯ” ದೇವರ ಪ್ರೀತ್ಯರ್ಥವಾಗಿಯೇ ನಾವು ಸೇವಾ ಪಥದಲ್ಲಿ ಸಾಗಿದ್ದೇವೆ. ನಾವು ಬಾಲ್ಯದಲ್ಲಿ ಮಠ ಮಂದಿರಗಳ ಬಗ್ಗೆ ಮಠಾಪತಿಗಳ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ, ಆಕ್ಷೇಪಗಳನ್ನು ಕೇಳಿದ್ದೆವು. ಓದಿದ್ದೆವು. ಆ ಆಕ್ಷೇಪಗಳಿಗೆ ಅವಕಾಶ ನೀಡಬಾರದೆಂದು ಆಗಲೇ ನಿರ್ಧಾರ ಮಾಡಿದ್ದೆವು.

ಹಂಸಲ ದೀವಿ- ಒಂದು ಪದ್ಯ

ಆಂಧ್ರಪ್ರದೇಶೇ ಗತ ಚಕ್ರವಾತ್ಯಾ

ವಿಧ್ವಂಸಿತೇಷು ಸ್ವಯಂಮಂಚಲೇಷು|

ಸಂಚಾರ್ಯ ಸೋ$ ಯಂ ವ್ರಣಿತಾಹತಾನಾಂ

ಆಶ್ವಾಸನಂ ಬಂಧುರಿವಾತತಾನ ||

(ಎಸ್. ಸುಂದರರಾಜನ್, ಒರಿಸ್ಸಾ)

18-6-68 ಉಡುಪಿಯಲ್ಲಿ ಆರಂಭಗೊಂಡ ಶ್ರೀಕೃಷ್ಣ ಚಿಕಿತ್ಸಾಲಯ ಮತ್ತು 1962ರಲ್ಲಿ ಆರಂಭವಾದ ಬೆಂಗಳೂರಿನ ಶ್ರೀಕೃಷ್ಣ ಸೇವಾಶ್ರಮ ಸಾಮಾನ್ಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸುವ ಬೆಳೆದು ನಿಂತ ಸೇವಾ ಸಂಸ್ಥೆಗಳು. ಅಂಗವಿಕಲ ಮಕ್ಕಳ ಆಶ್ರಯ ತಾಣ “ಅರುಣ ಚೇತನ” ಬೆಂಗಳೂರಿನಲ್ಲಿ ಮತ್ತೊಂದು ಹೊಸ ಉಪಕ್ರಮ. 1966 ನವೆಂಬರ್ 20 ಗೋಹತ್ಯಾ ನಿಷೇಧಕ್ಕಾಗಿ ಶ್ರೀಗಳವರು ಎರಡು ದಿನ ಉಪವಾಸ ಮಾಡಿದ್ದರು. ಅಂದು ಇಂದಿರಾಗಾಂಗೆ

ಬರೆದ ಪತ್ರ-धर्मपीठ तथा धार्मिक व्यक्तियों के पवित्र……

2. ದಿಟ್ಟ ಹೆಜ್ಜೆಗಳು

1.ಅಸ್ಪೃಶ್ಯತಾ ನಿವಾರಣೆ

ಉದಯವಾಣಿ ವಿಶೇಷ ಸಂಚಿಕೆ- (17-2-99)- “ಧಾರ್ಮಿಕ ನೆಲೆಯ ಸುಧಾಕರರಿಗೆ ಯಾವಾಗಲೂ ಎರಡು ಬಗೆಯ ಟೀಕಾಕಾರರಿರುತ್ತಾರೆ. ಅತಿ ಸಂಪ್ರದಾಯನಿಷ್ಠರು- “ಈತನು ಧರ್ಮವನ್ನು ಹಾಳು ಮಾಡಿದ. ನಮ್ಮ ಪರಂಪರೆ ಹಾಳಾಯಿತು. ಪೀಠದ ಘನತೆಗೆ ಕುಂದು” ಎಂದೆಲ್ಲಾ ಹೇಳುತ್ತಾರೆ. ಅತ್ತ ಕಡೆ ಕ್ರಾಂತಿವಾದಿಗಳು, ಮುಕ್ತ ಚಿಂತಕರೆನಿಸಿದವರು “ಮಠಾಪತಿ ಯೊಬ್ಬನ ಸುಧಾರಣಾ ವಾದವು ಬರಿಯ ಸೋಗು, ಮತಧರ್ಮವನ್ನು ಉಳಿಸುವ ಹಂಚಿಕೆ. ಧಾರ್ಮಿಕತೆಯನ್ನು ಗಟ್ಟಿಗೊಳಿಸುವ ಅಪಾಯಕಾರೀ ವಿಧಾನ” ಎನ್ನುತ್ತಾರೆ. “ದಲಿತ ಕೇರಿಗೆ ಪ್ರವೇಶಿಸಿದವರು ದಲಿತನನ್ನು ಉತ್ತರಾಕಾರಿ ಮಾಡುತ್ತೀರಾ” ಎಂಬ ಸವಾಲೆಸೆಯುತ್ತಾರೆ. ಈ ಜಗ್ಗಾಟವನ್ನು ಸುಧಾರಕನು ಇದಿರಿಸುವಾಗ ಆತನ ಪ್ರಾಮಾಣಿಕವಾದ, ವಾಸ್ತವಧಾರಿತವಾದ ಸುಧಾರಣಾ ದೃಷ್ಟಿಯ ಪ್ರಯತ್ನಕ್ಕೆ ಗೌರವ ಸಲ್ಲುವುದಿಲ್ಲ. ಬರಿಯ ಚರ್ಚೆ ವಾದಗಳು ತೊಡಗುತ್ತವೆ. ಇಂತಹ ನೋವುಗಳನ್ನು ವಿಶ್ವೇಶತೀರ್ಥರು ಅನುಭವಿಸಿದ್ದಾರೆ. (ಡಾ|| ಪ್ರಭಾಕರ ಜೋಶಿ)

ಬೆಂಗಳೂರಿನ ದಲಿತಕೇರಿಗೆ ಭೇಟಿ-

“ನಾವು ಜಗದ್ಗುರುಗಳೆನಿಸಿದವರು. ಇಡೀ ಲೋಕದ ಜನರಿಗೆಲ್ಲ ಧರ್ಮದ ಉಪದೇಶ ನೀಡುವ ಅಕಾರವುಳ್ಳವರು. ಹೀಗಿರುವಾಗ ನಮ್ಮ ಸಮಾಜದ ಪೈಕಿಯೇ ಕೆಲವು ಮಂದಿಯ ಬಳಿಗೆ ನಾವು ಹೋಗುವಂತಿಲ್ಲ, ಅವರಿಗೆ ಧರ್ಮದ ಬೆಳಕನ್ನು ನೀಡುವಂತಿಲ್ಲ, ಎನ್ನುವುದು ಅರ್ಥಹೀನ”. (1976 ಜನವರಿ, ಪ್ರಯಾಗದ ವಿಶ್ವಹಿಂದೂ ಸಮ್ಮೇಳನ)

(ಬೆಂಗಳೂರಿನ-ಮಲ್ಲೇಶ್ವರಂ ಈಜುಕೊಳದ ಬಡಾವಣೆಯ ಹರಿಜನ ಕೇರಿಯಲ್ಲಿ ಪಾದಯಾತ್ರೆ-1970)

“ಪೂಜ್ಯ ಶ್ರೀಪಾದರು ವಿಚಾರದ ಹಂತಕ್ಕೆ ನಿಲ್ಲಲಿಲ್ಲ. ಪರ್ಯಾಯದ ಅವ ಮುಗಿಯುತ್ತಿದ್ದಂತೆ ವಿಚಾರದ ಬೀಜಕ್ಕೆ ಆಚಾರದ ನೀರು, ಗೊಬ್ಬರ ಎರೆಯುವ ಹೆಜ್ಜೆ ಮುಂದಿಟ್ಟರು. ಮೊದಲ ಬಾರಿಗೆ ಬೆಂಗಳೂರಿನ ಜಬ್ಬಾರ್ ಬ್ಲಾಕಿನ ಹರಿಜನ ಕೇರಿಗೆ ಭೇಟಿ ಕೊಟ್ಟಾಗ ಅಲ್ಲಿನ ಬಂಧು ಭಗಿನಿಯರಿಗೆ ಹೇಳತೀರದಷ್ಟು ಸಂತಸ – ಸಂಭ್ರಮ. ಹೊಸ ಹುಟ್ಟನ್ನೇ ಪಡೆದಂತಹ ಅನುಭವ (ಆಧುನಿಕ ಸ್ಮೃತಿಕಾರ’ ಕೃತಿಕಾರ ಶ್ರೀವಿಶ್ವೇಶತೀರ್ಥರು- ಹೊ.ವೇ. ಶೇಷಾದ್ರಿ- ವಿಕ್ರಮ ಪತ್ರಿಕೆ)

ತತ್ತ್ವವಾದ- 1970ಮೇ- ಪ್ರತಿಭಟನೆಯ ಧ್ವನಿ-

“ಶ್ರೀ ಪೇಜಾವರ ಶ್ರೀಗಳು ತಾವು ಶ್ರೀಮದಾಚಾರ್ಯರು ತೋರಿದ ದಾರಿಯನ್ನು ಬಿಟ್ಟು ತಾನು ನಡೆದಿಲ್ಲವೆಂದು ಹೇಳಿದ್ದಾರೆ. ಶ್ರೀಮದಾಚಾರ್ಯರು ಹರಿಜನ ಕೇರಿಗಳಿಗೆ ಹೋಗಿ ಅವರ ತಲೆಯ ಮೇಲೆ ಕೈ ಇಟ್ಟು ಉಪದೇಶ ಮಾಡಲಿಲ್ಲ. ಮಾಡಬೇಕೆಂದು ಯಾರಿಗೂ ಹೇಳಿಲ್ಲ. ಅವರ ಪರಂಪರೆಯಲ್ಲಿ ಬಂದ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀರಾಘವೇಂದ್ರ ಸ್ವಾಮಿಗಳು ಶ್ರೀಪುರಂದರ ದಾಸರೇ ಮೊದಲಾದವರು ಹರಿಜನ ಕೇರಿಯಲ್ಲಿ ಸಂಚರಿಸಿ ಅವರ ತಲೆಯ ಮೇಲೆ ಕೈಯಿಟ್ಟು ಉಪದೇಶ ಮಾಡಿದರೆಂದು ಯಾವ ಇತಿಹಾಸದಲ್ಲಿಯೂ ಕೇಳಿಬಂದಿಲ್ಲ. ಇವರು ವಿಷ್ಣು ರಹಸ್ಯವನ್ನು ಓದಿಲ್ಲವೇ? ಆದ್ದರಿಂದ ಹರಿಜನ ಕಾಲೋನಿಗಳಲ್ಲಿ ಹೋಗಿ ಅವರಿಂದ ಪಾದಸೇವಾದಿಗಳನ್ನು ಸ್ವೀಕರಿಸಿ ಶ್ರೀಮಧ್ವಾಚಾರ್ಯರಿಗೆ ಅಸಮ್ಮತವಾದ ಕೆಲಸಗಳನ್ನು ಮಾಡುವುದು ಆ ಪೀಠಸ್ಥರಿಗೆ ದ್ರೋಹಬಗೆದಂತಲ್ಲವೇ?” (ಜನಾರ್ದನಾಚಾರ್ಯ- ಅಗ್ರಹಾರ-ಪುಂಗನೂರು) ಪೇಜಾವರ ಶ್ರೀಗಳ ಉತ್ತರ- “ಶ್ರೀಮಧ್ವಾಚಾರ್ಯರು ಮುಸಲ್ಮಾನರ ವಸತಿ ಪ್ರದೇಶಕ್ಕೆ ಹೋಗಿದ್ದಾರೆನ್ನುವುದಂತೂ ಸರ್ವಸಮ್ಮತ ವಾದ ಅಂಶ. ಸಹಸ್ರಾರು ಮುಸಲ್ಮಾನರಿಂದ ಸುತ್ತುವರಿಯಲ್ಪಟ್ಟವರಾಗಿ ಆಚಾರ್ಯರು ಆ ಭಾಗದಲ್ಲಿ ಸಂಚರಿಸಿದ್ದರ ವರ್ಣನೆಯು ಮಧ್ವವಿಜಯದಲ್ಲಿದೆ. ಧರ್ಮೋಪದೇಶಕ್ಕಾಗಿ ಅಂತಹ ಸ್ಥಳಗಳಿಗೆ ಹೋಗುವುದು ತಪ್ಪಾಗುವುದೇ?

QR Code Business Card