ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿ ತತ್ತ್ವಪ್ರ ಸಾರ ಮತ್ತು ಕೃಷ್ಣಪೂಜೆಗಾಗಿ ಎಂಟು ಮಂದಿ ಬಾಲಯತಿಗಳಿಗೆ ದೀಕ್ಷೆ ನೀಡಿದರು. ಅದರಲ್ಲಿ ಪೇಜಾವರ ಮಠಕ್ಕೆ ಅವರು ಕೊಟ್ಟ ಮೊದಲ ಯತಿ ಅಧೋಕ್ಷಜ ತೀರ್ಥರು. ಈ ಪರಂಪರೆಯಲ್ಲಿ ಬಂದ ಪ್ರಸಿದಟಛಿ ಯತಿ ಶ್ರೀವಿಜಯಧ್ವಜತೀರ್ಥರು. ಅಷ್ಟಾದಶಪುರಾಣಗಳಲ್ಲಿ ಒಂದಾದ ಭಾಗವತಕ್ಕೆ ಅವರು `ಪದರತ್ನಾವಲೀ’ ಎಂಬ ವ್ಯಾಖ್ಯಾನ ಬರೆದಿದ್ದಾರೆ. ಮಾಧ್ವ ಪರಂಪರೆಯಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ವಿಶ್ವಪತಿತೀರ್ಥರು, ವಿಶ್ವೇಶ್ವರತೀರ್ಥರು ಸಂಸ್ಕೃತ ವಾಙ್ಮಯಕ್ಕೆ ಕೊಡುಗೆಯನ್ನಿತ್ತ ಇತರ ಸನ್ಯಾಸಿಗಳು.
೧. ಆಶ್ರಮ ಸ್ವೀಕಾರ ಮತ್ತು ಅಧ್ಯಯನ
ಹುಟ್ಟೂರು, ಉಪ್ಪಿನಂಗಡಿಯ ಸಮೀಪದ ರಾಮಕುಂಜದಲ್ಲಿರುವ ಮಿಯಾರು. ಸುಬ್ರಹ್ಮಣ್ಯಕ್ಕೂ ಸಮೀಪ. ಉಡುಪಿಯಿಂದ ೧೨೦ ಕಿ,ಮೀ. ದೂರ. ದಿ|| ಎಂ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗಳಿಂದ ಕ್ರಿ.ಶ. ೨೭-೪-೧೯೩೧ ರಲ್ಲಿ ಎರಡನೆಯ ಮಗನಾಗಿ ಜನನ.ರಾಮಕುಂಜೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಹಳ್ಳಿಯ ಶಾಲೆಯಲ್ಲಿ ವಿದ್ಯಾ ಭ್ಯಾಸ. ೭ನೇ ವರ್ಷದಲ್ಲಿ ಉಪನಯನ. ರಾಮಕುಂಜಕ್ಕೆ ಬಂದ ಪೇಜಾವರದ (ಭಂಡಾರಕೇರಿಯ)ಶ್ರೀವಿಶ್ವಮಾನ್ಯತೀರ್ಥರು ವೆಂಕಟರಾಮುವನ್ನು ಕರೆದು ಕಲ್ಲುಸಕ್ಕರೆ ನೀಡಿ “ಸ್ವಾಮಿಯಾಗುತ್ತೀಯಾ” ಎಂದರು. `ಹ್ಞೂಂ’ ಎಂದ ವೆಂಕಟರಾಮುವಿಗೆ ೮ನೇಯ ವಯಸ್ಸಿನಲ್ಲಿ ೩-೧೨-೧೯೩೮ರಲ್ಲಿ ಹಂಪೆಯ ಚಕ್ರತೀರ್ಥದಲ್ಲಿ ಸನ್ಯಾಸ ದೀಕ್ಷೆ ನಡೆಯಿತು. ವೆಂಕಟರಾಮು ವಿಶ್ವೇಶತೀರ್ಥರಾದರು. ಶ್ರೀವಿದ್ಯಾಮಾನ್ಯರು ತರ್ಕ, ವೇದಾಂತಗಳಲ್ಲಿ ನಿಷ್ಣಾತ ಪಂಡಿತರು. ಅವರು ವಿದ್ವತ್ ಸಭೆಯೊಂದನ್ನು ನಡೆಸುತ್ತಿದ್ದರು. ಪುಟ್ಟ ಯತಿ ವಿಶ್ವೇಶತೀರ್ಥರನ್ನು ಆ ಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿದರು. ತತ್ಕಾಲದಲ್ಲಿ ಒಂದು ಶ್ಲೋಕವನ್ನು ರಚಿಸಿ ವಿಶ್ವೇಶತೀರ್ಥರು ಹೇಳಿದರು. ಇದರಿಂದ ಶ್ರೀವಿದ್ಯಾಮಾನ್ಯರಲ್ಲಿ ಶಿಷ್ಯತ್ವ ದೃಢಪಟ್ಟಿತು. ಅವರಲ್ಲಿ ಕುಂದಾಪುರದ ಸಮೀಪದ ಮಠ ಭಂಡಾರಕೇರಿಯ ಗುರುಕುಲದಲ್ಲಿ ೧೯೪೩ರಿಂದ ಎಂಟು ವರ್ಷಗಳ ಕಾಲ ಉದ್ಗ್ರಂಥಗಳನ್ನು ಅಧ್ಯಯನ ಮಾಡಿದರು.
೨. ಧಾರ್ಮಿಕ ಕಾರ್ಯಗಳು
೪-೧-೧೯೫೩ರಲ್ಲಿ ಮೊದಲ ಪರ್ಯಾಯ. ಮೈಸೂರು ಮಹಾರಾಜರನ್ನು ಬರ ಮಾಡಿಸಿಕೊಂಡು ಮಾಧ್ವತತ್ತ್ವeನಸಮ್ಮೇಳನ ಅಖಿಲ ಭಾರತಮಾಧ್ವಮಹಾಮಂಡಲಸಂಸ್ಥೆಯ ಸ್ಥಾಪನೆ.ಪ್ರಾಚೀನ ಸಂಸ್ಕೃತಿಯ ರಕ್ಷಣೆ ಮತ್ತು ತತ್ತ್ವಶಾಸ್ತ್ರದ ಅಧ್ಯಯನಕ್ಕಾಗಿ ಬೆಂಗ ಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ ೨೮.೭.೧೯೫೬ರಲ್ಲಿ. ಈ ಸಂಸ್ಥೆಯಿಂದ ೧೩ ವರ್ಷಗಳ ವೇದ, ವೇದಾಂತ ಮತ್ತು ಯಾಜ್ಞಿಕ ಕ್ರಿಯೆಗಳ ಅಧ್ಯಯನ ಪೂರೈಸಿ ಇದುವರೆಗೆ ೩೫೦ ಮಂದಿ ಹೊರಬಂದಿದ್ದಾರೆ. ಈಗ ೩೦೦ ವಿದ್ಯಾರ್ಥಿಗಳು ಉಚಿತ ಊಟ ವಸತಿಗಳನ್ನು ಪಡೆದು ಅಧ್ಯಯನ ನಡೆಸುತ್ತಿದ್ದಾರೆ. ಸಂಸ್ಥೆಯಲ್ಲೇ ಸಿದಟಛಿ ರಾದ ೨೮ ಅಧ್ಯಾಪಕರಿದ್ದಾರೆ. ಈ ಸಂಸ್ಥೆಯು ಕರ್ನಾಟಕ ಸರಕಾರದ ಮನ್ನಣೆ ಪಡೆದಿದೆ.
೧ ಬದರಿಯಲ್ಲಿ ಅನಂತ ಮಠ
೪.೧೦.೧೯೭೮ರಲ್ಲಿ ಹತ್ತು ಲಕ್ಷರೂಪಾಯಿ ವೆಚ್ಚದಲ್ಲಿ ಬದರೀಕ್ಷೇತ್ರದಲ್ಲಿ ಅನಂತ ಮಠವನ್ನು ಸ್ಥಾಪಿಸಿದರು. ಮೂರು ಬಾರಿ ನೂರಾರು ಭಕ್ತರನ್ನು ಜೊತೆಯಲ್ಲಿ ಕರೆದುಕೊಂಡು ತೀರ್ಥಕ್ಷೇತ್ರಗಳಿಗೆ ಯಾತ್ರೆ. ೧೯೮೯ ರಲ್ಲಿ ಶ್ರೀಮಧ್ವಾಚಾರ್ಯರ ೭೫೦ನೇ ವರ್ಧಂತಿಯನ್ನು ಪಾಜಕದಲ್ಲಿ ವೈಭವದಿಂದ ನಡೆಸಿ, ಮಧ್ವರ ಪ್ರತೀಕದೊಂದಿಗೆ ದೇಶಾದ್ಯಂತ ಭಕ್ತಿರಥಯಾತ್ರೆ. ೩-೧೦-೮೯ರಲ್ಲಿ ಆಗಿನ ರಾಷ್ಟ್ರಪತಿ ಮಾನ್ಯ ವೆಂಕಟರಾಮನ್ ಅವರು ಪಾಲ್ಗೊಂಡಂತೆ ದೆಹಲಿಯಿಂದ ಮಧ್ವಜಯಂತ್ಯುತ್ಸವ ಹಾಗೂ ಮಧ್ವಪ್ರತೀಕದ ಪ್ರತಿಷ್ಠೆ, ಬದರಿಯಲ್ಲಿ. ೨೫-೭-೧೯೯೨ ರಿಂದ ೧೨-೯-೧೯೯೨ರವರೆಗೆ ೫೦ ದಿನ ಅನೇಕ ಜಿeಸುಗಳಿಗೆ ಪಾಠ ಪ್ರವಚನ ನಡೆಸುತ್ತ ಬದರಿಯಲ್ಲಿ ಚಾತುರ್ಮಾಸ್ಯವ್ರತ ದೀಕ್ಷೆ.
೨. ಪಾಜಕದಲ್ಲಿ ಗುರುಕುಲ
೧೨-೭-೯೦ರಂದು ಮಧ್ವಾಚಾರ್ಯರ ಅವತಾರ ಭೂಮಿ ಪಾಜಕದಲ್ಲಿ ವಾಸುದೇವಗುರುಕುಲಸ್ಥಾಪನೆ. ಸುಮಾರು ೬೦ ವಿದ್ಯಾರ್ಥಿಗಳು ಇಲ್ಲಿ ಸಂಸ್ಕೃತ, ವೈದಿಕ ಅಧ್ಯಯನ ನಡೆಸುತ್ತಿದ್ದಾರೆ. ಸರಕಾರದಿಂದ ೩೭ ಎಕರೆ ಪ್ರದೇಶವನ್ನು ಪಡೆದು ವಿವಿಧ ಶೈಕ್ಷಣಿಕ ಚಟುವಟಿಕೆಯ ಉದ್ದೇಶದ ಯೋಜನೆಯ ಉದ್ಘಾಟನೆ. ಕರ್ನಾಟಕದ ರಾಜ್ಯಪಾಲ ಗೋವಿಂದನಾರಾಯಣ ಆವರ ಅಧ್ಯಕ್ಷತೆಯಲ್ಲಿ ೨೭-೧೦-೮೨- ಪಾಜಕ ಕ್ಷೇತ್ರದಲ್ಲಿ ಇವರ ನೇತೃತ್ವದಲ್ಲಿ “ಪಾಜಕ ಪ್ರತಿಷ್ಠಾನ” ಸಂಸ್ಥೆ ಪಾಜಕದ ಸಮಗ್ರ ಅಭಿವೃದಿಟಛಿ ಗಾಗಿ ಶ್ರಮಿಸುತ್ತಿದೆ.
೩. ಗ್ರಂಥ ಪ್ರಕಟಣೆ
ಖ್ಯಾತ ವಿದ್ವಾಂಸ ಶ್ರೀಬನ್ನಂಜೆ ಗೋವಿಂದಾಚಾರ್ಯರು, ಶ್ರೀ ಶ್ರೀ ಹೃಷೀಕೇಶತೀರ್ಥರು ಬರೆದ ಪ್ರಾಚೀನ ಹಸ್ತಪ್ರತಿಯ ಆಧಾರದಿಂದ ಸಂಶೋಸಿದ ಮಧ್ವಾಚಾರ್ಯರ ಸಮಗ್ರ ಕೃತಿ- ಸರ್ವಮೂಲಗ್ರಂಥಗಳ ಪ್ರಕಾಶನ ೧೯೭೦-೮೦. ಆನಂದತೀರ್ಥ ಪ್ರತಿಷ್ಠಾನದ ಮೂಲಕ ಕನ್ನಡದಲ್ಲಿ ಸಮಗ್ರ ಸರ್ವಮೂಲ ಪ್ರಕಾಶನ ೧೯೮೬-೯೯. ಸಮಗ್ರ ಗೀತಾಭಾಷ್ಯ, ಗೀತಾತಾತ್ಪರ್ಯ, ಉಪನಿಷತ್ ಖಂಡಾರ್ಥ, ಉಪನಿಷತ್ ಭಾಷ್ಯಗಳ ಪ್ರಕಾಶನ. ಗೀತೆಯ ಸಾರ ಸಂಗ್ರಹ- `ಗೀತಾಸಾರೋದಾಟಛಿರ’ ಪುಸ್ತಕವನ್ನು ಬರೆದು ಪ್ರಕಟಣೆ -೧೯೬೨. “ತತ್ವಾಂಜಲಿ” ನ್ಯಾಯಸುಧಾಸಾರ (ಎರಡು ಭಾಗ) ಹಾಗೂ ಸರ್ವಮೂಲ ಸಾರ ಸಂಗ್ರಹ ಅವರು ಬರೆದ ಇತರ ಕೃತಿಗಳು
೪. ಸಂಶೋಧನ ಕೇಂದ್ರ
ವಿದ್ಯಾಪೀಠದಲ್ಲಿ ಗಣಕಯಂತ್ರ, ಅಂತರರಾಷ್ಟ್ರೀಯ ಸಂಪರ್ಕ ಜಾಲಗಳ ಸೌಲಭ್ಯ ಹೊಂದಿದ `ಪೂರ್ಣಪ್ರಜ್ಞ ಸಂಶೋಧನ ಮಂದಿರ’ದ ಸ್ಥಾಪನೆ. ೧೪-೯-೧೯೯೪
೫. ತೀರ್ಥ ಕ್ಷೇತ್ರದಲ್ಲಿ ಮಂದಿರಗಳು
ತಿರುಪತಿಯಲ್ಲಿ ಉಡುಪಿ ಮಠ- ೨೬-೬-೮೩.
ಹರಿದ್ವಾರದಲ್ಲಿ ಮಧ್ವಮಂದಿರ-೧೯೯೬. ವಿದ್ಯಾಪೀಠದ ಕೃಷ್ಣದೇವಾಲಯ- ೪-೭-೧೯೮೩ ಕಾಶೀ, ರಾಮೇಶ್ವರ, ಮಥುರಾಗಳಲ್ಲೂ ಸ್ಥಳವನ್ನು ಈಗಾಗಲೇ ಪಡೆಯಲಾಗಿದೆ.
೬. ಪಂಡಿತ ಪೋಷಣಾ ನಿ
೧೯೮೯ರಲ್ಲಿ ಮಧ್ವಾಚಾರ್ಯರ ೭೫೦ನೇ ವರ್ಧಂತಿ ಉತ್ಸವದ ಸ್ಮಾರಕವಾಗಿ ೭ಲಕ್ಷ ರೂಪಾಯಿಗಳ ನಿಯನ್ನು ಮೂಲಧನವನ್ನಾಗಿಟ್ಟು ವರ್ಷಕ್ಕೆ ಬರುವ ಒಂದು ಲಕ್ಷ ರೂಪಾಯಿ ಬಡ್ಡಿಯನ್ನು ಶಾಸ್ತ್ರ ಗ್ರಂಥಗಳನ್ನು ಸಾಂಪ್ರದಾಯಕವಾಗಿ ಅಧ್ಯಯನ ಮಾಡಿ ವಿದ್ವಾಂಸರ ಸಮಕ್ಷಮದಲ್ಲಿ ಉತ್ತಮ ರೀತಿಯಲ್ಲಿ ಪರೀಕ್ಷೆ ನೀಡಿದ ವಿದ್ಯಾರ್ಥಿಗಳಿಗೆ ನೀಡುವದು. ಇದೀಗ ಇಂತಹ ಮೂರು ನಿಗಳು ಸ್ಥಾಪನೆಗೊಂಡು ಸುಮಾರು ಹನ್ನೆರಡು ಮಂದಿ ವಿದ್ವಾಂಸರು ಈ ಸೌಲಭ್ಯ ಪಡೆದಿದ್ದಾರೆ.
೭. ವಿದ್ಯಾಮಾನ್ಯ ವಿಶ್ವೇಶ ಪ್ರಶಸ್ತಿ ತಮ್ಮ ಗುರುಗಳ ೮೦ನೇ ವರ್ಷದ ನೆನಪಿಗಾಗಿ ಒಂದು ನಿಯನ್ನು ಸ್ಥಾಪಸಿ ಪ್ರತಿ ವರ್ಷ ಒಬ್ಬ ಪ್ರಾಚೀನ ವಿದ್ವಾಂಸರಿಗೆ ಒಂದು ಲಕ್ಷ ಪಾರಿತೋಷಕ-ವಿದ್ಯಾಮಾನ್ಯ ಪ್ರಶಸ್ತಿ ೧೯೯೮ರಲ್ಲಿ ಇಂಥಹುದೇ ಮತ್ತೊಂದು ನಿಯಿಂದ ವಿಶ್ವೇಶ ಪ್ರಶಸ್ತಿ -ತ್ರಿಮತಸ್ಥ ವಿದ್ವಾಂಸರಿಗೆ.
೩. ಸಾಮಾಜಿಕ ಕಾರ್ಯಗಳು
೧. ೧೯೬೭ ಬಿಹಾರದ ಬರಗಾಲದಲ್ಲಿ ನೊಂದ ಜನರಿಗೆ ಪಾದಯಾತ್ರೆ ಮಾಡಿ ಧನ ಸಂಗ್ರಹಿಸಿ ಪರಿಹಾರ, ಗಯಾ ಜಿಲ್ಲೆಯ ನವಾದಾ ಗ್ರಾಮದಲ್ಲಿ ಡಾ.|| ಬಿ.ಕೆ. ಸುಬ್ಬರಾಯರ ನೇತೃತ್ವದಲ್ಲಿ ಆಸ್ಪತ್ರೆ ಸ್ಥಾಪಿಸಿ ವಾಹನದಲ್ಲಿ ಸುತ್ತಮುತ್ತಲ ಹಳ್ಳಿಗಳಿಗೆ ಔಷಧೋಪಚಾರ.
೨. ೧೯೮೬- ಬಾಗಿಲಕೋಟೆಯ ಬರಗಾಲದ ಸಂದರ್ಭದಲ್ಲಿ `ಕಾರಟಗಿ’ ಗ್ರಾಮದಲ್ಲಿ ಸಂತ್ರಸ್ಥರಿಗೆ ಕೂಲಿ ನೀಡಿ ಮೂರು ತಿಂಗಳು ಕೆಲಸಕೊಟ್ಟು ಕೆರೆಯ ಹೂಳೆತ್ತುವ ಸಹಾಯ. ಇದಕ್ಕೆ ತೊಡಗಿಸಿದ ಹಣ ೧.೨೫ಲಕ್ಷ. ಕರುವಿನಕೊಪ್ಪ ಚಿಂಚೋಳಿಗಳಲ್ಲಿ ಬರಗಾಲದಲ್ಲಿ ಗೋವುಗಳ ಕೇಂದ್ರ.
೩. ೧೯೭೮ರಲ್ಲಿ ಆಂಧ್ರದ ಹಂಸಲದಿವಿ ಗ್ರಾಮ ಸಮುದ್ರದ ಪಾಲಾದಾಗ ಒಂದು ಗ್ರಾಮವನ್ನು ದತ್ತು ಪಡೆದು ೧೫೦ ಮನೆಗಳ ನಿರ್ಮಾಣ. ೧೯೫೫- `ಗೋವಿಂದಪುರ’ ಭೂಕಂಪಕ್ಕೆ ತುತ್ತಾದಾಗ ಸಂತ್ರಸ್ಥರಿಗೆ ೬೦ ಮನೆಗಳ ನಿರ್ಮಾಣ.
೧೯-೧೧-೧೯೬೬ ಬೆಂಗಳೂರಿನ `’ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗೋಹತ್ಯಾನಿಷೇಧಕ್ಕಾಗಿ ಎರಡು ದಿನ ನಿರ್ಜಲ ಉಪವಾಸ. ೨೬-೯-೧೯೯೪ ಆಂಧ್ರದ `ರುದ್ರಾರಂ’ (ಹೈದರಾಬಾದ್) ಕಸಾಯಿ ಖಾನೆಯ ವಿರುದಟಛಿ `ಪಶುರಕ್ಷಾಯಜ್ಞ’ ಚಳುವಳಿಗಾಗಿ ಉಪವಾಸವಿದ್ದು ೧೨ ಕಿ.ಮೀ. ನಡಿಗೆ ಪೋಲೀಸರ ವಶಕ್ಕೆ. ೧೮-೬-೬೮ ಉಡುಪಿಯಲ್ಲಿ ಶ್ರೀಕೃಷ್ಣಚಿಕಿತ್ಸಾಲಯ ೧೯೬೨ರಲ್ಲಿ ಬೆಂಗಳೂರಿನಲ್ಲಿ “ಶ್ರೀಕೃಷ್ಣಸೇವಾಶ್ರಮ” ಆಸ್ಪತ್ರೆ. ಈಗ ಇದು ಜಯನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ “ಶ್ರೀಕೃಷ್ಣಸೇವಾಧಾಮ” ಅನಾಥ ಮಕ್ಕಳ ಕೇಂದ್ರ.ವರದಾ ನದಿಯ ತೀರದಲ್ಲಿ ಕರ್ಜಿಗಿಯಲ್ಲಿ “ವೃದಾಟಛಿಶ್ರಮ”
ಬೆಂಗಳೂರಿನಲ್ಲಿ “ಅರುಣಚೇತನ” ಅಂಗವಿಕಲಮಕ್ಕಳಶಾಲೆ
೪. ದಿಟ್ಟ ಹೆಜ್ಜೆಗಳು
೧. ೧೯೭೦ ಬೆಂಗಳೂರಿನ ಮಲ್ಲೇಶ್ವರಂ ಈಜುಕೊಳ ಬಡಾವಣೆಯ ಹಿಂದುಳಿದವರ ವಸತಿ ನಿವಾಸಕ್ಕೆ ಭೇಟಿ.
೨. ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿನಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಧಾಳಿ ಯಾದಾಗ ನಿರಾಶ್ರಿತರಾದವರಿಗೆ ಆಶ್ರಯದಾನ.
೩. ತುರ್ತುಪರಿಸ್ಥಿತಿಯಲ್ಲಿ ಪ್ರತಿಭಟನೆ. ಇಂದಿರಾಗಾಂಗೆ ಎರಡು ಪತ್ರಗಳು. ಮೊದಲ ಪತ್ರದಲ್ಲಿ ಯತಿಗಳಾಗಿ ಸ್ವಾತಂತ್ರ್ಯ ಭಿಕ್ಷೆ ನೀಡಿದರೆ, ಎರಡನೆಯದು ಕಟುವಾದ ಪತ್ರ. ಅದರ ಕೊನೆಯ ಸಾಲು- “ಈ ಪತ್ರ ನಿಮ್ಮಲ್ಲಿ (ಇಂದಿರಾಗಾಂ) ಆಸೀಮ ಕ್ರೋಧವನ್ನು ಉಕ್ಕಿಸೀತೆಂಬ ಅರಿವು ನನಗಿದೆ.”
೪. ೧೯೮೧ ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ದಲಿತರು ಬಲಾತ್ಕಾರವಾಗಿ ಅಮಿಷಕ್ಕೊಳಗಾಗಿ ಮತಾಂತರಗೊಂಡಾಗ ಅಲ್ಲಿಗೆ ಭೇಟಿ ನೀಡಿ ಪರಿಹಾರೋಪಾಯ.
೫. ಪಂಜಾಬಿನಲ್ಲಿ ಶಾಂತಿಯಾತ್ರೆ- ಲೂಯಾನ, ತರನ್ ಶರನ್, ಅಮೃತಸರ ಗಳಲ್ಲಿ ಅನೇಕ ಸಿಖ್ ನಾಯಕರೊಂದಿಗೆ ಮಾತುಕತೆ.
೬. ೧೯೮೪ರಲ್ಲಿ ಶ್ರೀಕೃಷ್ಣಮಠದ ಸಭಾಭವನದಲ್ಲಿ “ಈದ್‌ಮಿಲನ್” ಸೌಹಾರ್ದ ಕೂಟ- ಮುಸ್ಲಿಂ ಸಮ್ಮೇಳನ. ಮುಸ್ಲಿಂ ನಾಯಕರಾದ ಆಲಿಯಾನ್ ಮೌಲಾನಾ ಮಹಿದುದ್ದೀನ್ ಖಾನ್ ಮೊದಲಾದವರೊಂದಿಗೆ ಸೌಹಾರ್ದ ಸಮಾಲೋಚನೆ.
೭. ರಾಮಸೇವೆಗಾಗಿ ಫರೂಕಾಬಾದಿನಲ್ಲಿ ಸ್ಥಾನಬದಟಛಿತೆ ೩೦-೧೧-೧೯೯೦, ೬-೧೨- ೧೯೯೬ ಕರಸೇವೆಯಲ್ಲಿ ಪಾಲು. ಅನಿರೀಕ್ಷಿತ ವಿವಾದಿತ ಕಟ್ಟಡದ ಧ್ವಂಸಕ್ಕಾಗಿ ವಿಶ್ವಹಿಂದೂಪರಷತ್ತಿನ ಮೇಲೆ ಬೇಸರ.
೮. ಉತ್ತರ ಭಾರತದ ಪರಿಶಿಷ್ಟವರ್ಗಕ್ಕೆ ಸೇರಿದ `’ಉಮಾಭಾರತಿ” ಅವರಿಗೆ ಸನ್ಯಾಸ ದೀಕ್ಷೆ.
೫. ಪರ್ಯಾಯದಲ್ಲಿ ಸುಧಾರಣೆಗಳು
೧. ಮೊದಲ ಪರ್ಯಾಯ ೧೯೫೨-೫೪- ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ ಭೋಜನವ್ಯವಸ್ಥೆಯನ್ನು ಇತರ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು. ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಮಾಧ್ವತತ್ತ್ವeನ ಸಮ್ಮೇಳನ
೨. ಎರಡನೆಯ ಪರ್ಯಾಯ ೧೯೬೮-೭೦ ಶ್ರೀಕೃಷ್ಣ ಚಿಕಿತ್ಸಾಲಯದ ಆರಂಭ ವಿಶ್ವ ಹಿಂದೂ ಪರಿಷತ್ತಿನ ಸಮ್ಮೇಳನ ಗುರುಗಳಿಗೆ ಕೃಷ್ಣಪೂಜಾಕಾರ ಉಡುಪಿಯ ಬಡಗು ಮಾಳಿಗೆ ಪುನರ್ನಿಮಾಣ
೩. ಮೂರನೆಯ ಪರ್ಯಾಯ ೧೯೮೪-೮೬ ಶ್ರೀಕೃಷ್ಣಪ್ರತಿಷ್ಠಾಸಪ್ತಶತಮಾನೋತ್ಸವ ಶ್ರೀಕೃಷ್ಣಧಾಮ ಛತ್ರದ ನಿರ್ಮಾಣ ರಾಜಾಂಗಣ ಸಭಾಭವನದ ನಿರ್ಮಾಣ ಸುಮಾರು ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀಕೃಷ್ಣಮಠದ ಸರ್ವತೋಮುಖ ಅಭಿವೃದಿಟಛಿ ಪ್ರತಿನಿತ್ಯ ಧಾರ್ಮಿಕಪ್ರವಚನ ಹಾಗೂ ವಿವಿಧಕಲಾತಂಡಗಳಿಂದ ಸಾಂಸ್ಕೃತಿPಕಾರ್ಯಕ್ರಮದ ವ್ಯವಸ್ಥೆ.
August 23rd, 2010 at 5:43 pm
Shree Shree swamijiyavarige saashtanga pranamagalu,
this is the one greatest website I have ever visited and expect a great result to the mankind in future. One should open this site every day to gain some sort of knowledge in our busy daily life.
This is going to be first step towards performing ‘jnana yajna’.
Saashtanga namaskaragalondige,
sampigethaya.
August 28th, 2010 at 10:41 pm
my father late yelluru keshava bhat was ardent devotee of sri madhwacharya and sri pejavara swamiji.sri pejawara swamiji also respected my father so much because he was a scholar in veda,paurohitya and agama.after sri vadiraja swamiji of sode mutt it is sri pejavara swamiji who is converting hindus into hindus and brahmins into brahmin what i mean is he is creating an awreness for all of us about our religion,culture and social responsibility.i like this site very much.other day i listened to the speeches of mr.s.l.byrappa and dr.putturaya. through this website swamiji can communicate to lot of his devotees.but he has to reduce his pace consdering his age.going to the daliths was one of the best gesture ever done by any swamiji.
dr.raghavendra bhat .k,mangalore