ನಾ ಕಂಡ ಪರಮಪೂಜ್ಯ ಶ್ರೀಪಾದಂಗಳು
Wednesday, August 4th, 2010 - Vishveshavani - 0 Commentಲೇಖಕರು : ಶ್ರೀಮಾನ್ವಿ ನರಸಿಂಗರಾಯರು ಎಂ.ಎ. ಹೈದರಾಬಾದ (ಹೈದರಾಬಾದ್ ಕರ್ಣಾಟಕದಲ್ಲಿ ಬೆಳಕನ್ನು ಬಡಿದೆಬ್ಬಿಸಿದ ಜಾಗೃತಿಯ ದೂತರಲ್ಲಿ ಶ್ರೀನರಸಿಂಗರಾಯರು ಅಗ್ರೇಸರರು. ಸಾಹಿತ್ಯ, ರಾಜಕಾರಣ, ಕನ್ನಡ ಚಳುವಳಿ ಹಾಗೂ ಧರ್ಮ ಜಾಗೃತಿ ಹೀಗೆ ಚತುರ್ಮುಖ ಚಟುವಟಿಕೆಗಳಿಂದ ಮೊಗಲಾಯಿತನದ ಮುಸುಕೆಳೆದು ಮಲಗಿದ್ದ ಅಚ್ಚ ಕನ್ನಡ ಭಾಗದಲ್ಲಿ eನದ ನಸಕು ಹರಿದು ಚೈತನ್ಯ ಮಿಸುಕಾಡುವಂತೆ ಮಾಡಿದ ಶ್ರೀ ಮಾನ್ವಿಯವರು ವಾಗ್ದೇವಿಯ ಚರಣಚಾರಣರಾಗಿದ್ದಾರೆ. ಅವರ ಹೃದಯದಂತೆ ಮಾತು ಮಿದು, ವಿನಯದ ಗವಸಣಿಕೆಯಲ್ಲಿ ಬಿಗಿದಿಟ್ಟರೂ ಅವರ ವಿದ್ಯೆಯ ವೀಣೆಯು ಸಪ್ತಸ್ವರಗಳನ್ನೆಲ್ಲ ಝೇಂಕರಿಸುತ್ತದೆ. ಈಗ ಉಸ್ಮಾನಿಯಾ ವಿಶ್ವವಿದ್ಯಾಲಯದ [...]


