Friday, November 12th, 2010 - Vishveshavani - 2 Comments
ಕ್ರಿ.ಶ.೧೪೮೦ರಿಂದ ೧೯೦೦ರ ತನಕ ೧೨೦ ವರುಷಗಳ ಸಾರ್ಥಕ ಜೀವನ ನಡೆಸಿದವರು ಶ್ರೀಮದ್ವಾದಿರಾಜ ಗುರುಸಾರ್ವಭೌಮರು. ಇವರು ಬರೆದಂತಹ ಗ್ರಂಥಗಳು ಅನೇಕ. ಅವು ದೊಡ್ಡವೇ ಇರಲಿ ಚಿಕ್ಕವೇ ಇರಲಿ ಒಂದೊಂದೂ ಹರಿಯ ಸರ್ವೋತ್ತಮತ್ವವನ್ನೇ ಸಾರುವ ಅದ್ಭುತರತ್ನಗಳು. ಅವುಗಳಲ್ಲಿ ಒಂದು ಈ ಸರಸಭಾರತೀ ವಿಲಾಸ. ಇದು ಒಟ್ಟು ೭೦೦ ಶ್ಲೋಕಗಳನ್ನೊಳಗೊಂಡಿದೆ. ಇದರಲ್ಲಿ ಪಾಂಡಿತ್ಯ ಪ್ರದರ್ಶನ, ಅನವಶ್ಯಕವಾದ ಮಾತುಗಳ ಅಬ್ಬರ ಯಾವುದೂ ಇಲ್ಲ. ಅಜ್ಞರಿಗೂ ಅರ್ಥವಾಗುವಂತೆ ಗ್ರಂಥಗಳನ್ನು ರಚಿಸುವುದು ವಾದಿರಾಜರ ವಿಶೇಷತೆ. ಇದರಲ್ಲಿ ಹೇಳಿರುವ ಪ್ರಮೇಯಗಳೆಲ್ಲಾ ಶ್ರುತಿಸಮ್ಮತವಾದವುಗಳು. ಈ ಗ್ರಂಥದ ಅಧ್ಯಯನವು ಮುಕ್ತಿಗೆ ಯೋಗ್ಯತೆಯನ್ನು ತಂದುಕೊಡುವುದರಿಂದ ನಿತ್ಯವೂ ಪಾರಾಯಣ ಯೋಗ್ಯ ಎಂದು ವಾದಿರಾಜರೇ ಆಜ್ಞಾಪಿಸಿರುತ್ತಾರೆ.
ಇಂತಹ ಸರಸಭಾರತೀ ವಿಲಾಸವೆಂಬ ಶಾಸ್ತ್ರಕಾವ್ಯವನ್ನು ನಮಗೆ ನೀಡಿರುವ ವಾದಿರಾಜರಿಗೆ ನಿತ್ಯವೂ ಪ್ರಣಾಮಗಳನ್ನರ್ಪಿಸಿ ಈ ಗ್ರಂಥದ ವಿಶೇಷತೆಯನ್ನು ಶ್ರಿಶ್ರೀವಿಶ್ವೇಶತೀರ್ಥ ಶ್ರೀಪಾದರ ಮಾತುಗಳಲ್ಲಿ ಕೇಳೋಣ.
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.