ಭಗವದ್ಗೀತಾ ಪ್ರವಚನ ಮಂಗಲೋತ್ಸವ – ಧಾರವಾಡ

ಭಗವದ್ಗೀತಾ ಪ್ರವಚನ ಮಂಗಲೋತ್ಸವ – ಧಾರವಾಡ

Thursday, February 17th, 2011 - - 0 Comment

ದಿನಾಂಕ ೧೫.೦೨.೨೦೧೧ ರಂದು ಧಾರವಾಡದ ಮಾಳಮಡ್ಡಿಯಲ್ಲಿನ ವನವಾಸಿ ರಾಮಮಂದಿರದಲ್ಲಿ ಸತ್ಯಕಾಮ ಸೇವಾಸಮಿತಿಯ ವತಿಯಿಂದ ನಡೆದ ಶ್ರೀಭಗವದ್ಗೀತಾ ಮಂಗಲ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಉಪಸ್ಥಿತರಿದ್ದರು. ಧ್ಯಾನಪ್ರಮೋದ ಪ್ರಶಸ್ತಿ ವಿಜೇತರಾದ ಶ್ರೀಮಧ್ವಾಚಾರ್ಯ ಮೊಖಾಶಿ ಇವರಿಂದ ಭಗವದ್ಗೀತೆಯ ಕೊನೆಯ ಅಧ್ಯಾಯದ ಪ್ರವಚನ ನಡೆಯಿತು. ಶ್ರೀಗಳಿಗೆ ಸನ್ಮಾನ ಮತ್ತು ೮೦ ವರ್ಷಗಳ ಸುಸಂದರ್ಭದಲ್ಲಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಕೊನೆಯಲ್ಲಿ ಅನುಗ್ರಹಸಂದೇಶವನ್ನಿತ್ತ ಶ್ರೀಗಳು ನೆರೆದಿದ್ದ ಎಲ್ಲಾ ವಿದ್ವಾಂಸರಿಗೂ ಹಾರಹಾಕಿ ಫಲಮಂತ್ರಾಕ್ಷತೆಯನ್ನು ಕೊಟ್ಟರು.

ಗಾಯತ್ರಿ ತಪೋಭೂಮಿಯಲ್ಲಿ ಶ್ರೀಗಳ ೮೦ನೇ ವರ್ಷದ ನಿಮಿತ್ತ ತುಲಾಭಾರ

ಗಾಯತ್ರಿ ತಪೋಭೂಮಿಯಲ್ಲಿ ಶ್ರೀಗಳ ೮೦ನೇ ವರ್ಷದ ನಿಮಿತ್ತ ತುಲಾಭಾರ

Thursday, February 17th, 2011 - - 0 Comment

ದಿನಾಂಕ ೧೬.೦೨.೨೦೧೧ರಂದು ಹಾವೇರಿಯ ತಡಸದಲ್ಲಿರುವ ಗಾಯತ್ರಿ ತಪೋಭೂಮಿಯಲ್ಲಿ ಶ್ರೀಗಾಯತ್ರ್ಯಾದಿ ದೇವತಾಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಕೃಷ್ಣಪೂಜೆ, ಹಾಗೂ ಶ್ರೀಗಳ ೮೦ನೇ ವರ್ಷದ ನಿಮಿತ್ತ ತುಲಾಭಾರ ಕಾರ್ಯಕ್ರಮವು ಶ್ರೀಯೋಗಿರಾಜ ಆಚಾರ್ಯ ಬಾಲಕೃಷ್ಣಜೀ, ಮಹಾಮಂತ್ರಿ, ಪತಂಜಲಿ ಯೋಗಪೀಠ ಟ್ರಸ್ಟ್, ಹರಿದ್ವಾರ ಮತ್ತು ಶ್ರೀಸುಭದ್ರಾ ಮಾತಾಜೀ, ಗಂಗೋತ್ರಿ ಇವರ ಸಾನಿಧ್ಯದಲ್ಲಿ ನೆರವೇರಿತು. ಶ್ರೀಗಳ ಪೂಜೆ ಮುಗಿದ ನಂತರ ಶ್ರೀಗಳಿಗೆ ಪಾದಪೂಜೆ, ನಾಣ್ಯಗಳಿಂದ ತುಲಾಭಾರವನ್ನು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಶ್ರೀಪ್ರೇಮಾನಂದ ಸರಸ್ವತಿ ಮಹರಾಜ್ ಉತ್ತರಕಾಶಿ, ಹಿಮಾಲಯ, ಶ್ರೀರಾಮಸ್ವರೂಪಾನಂದಜೀ ಮಹರಾಜ್ [...]

ಮಧ್ವನವಮಿ – ಉಜಿರೆ

ಮಧ್ವನವಮಿ – ಉಜಿರೆ

Saturday, February 12th, 2011 - - 0 Comment

12 Feb 2011 [Photos by - Venktakrishna, Ujire] ಉದಯವಾಣಿ ವರದಿ: 12 Feb 2011

ಗುರುವಂದನಾ ಸಮಾರಂಭ – ಪೂರ್ಣಪ್ರಜ್ಞ ವಿದ್ಯಾಪೀಠ

ಗುರುವಂದನಾ ಸಮಾರಂಭ – ಪೂರ್ಣಪ್ರಜ್ಞ ವಿದ್ಯಾಪೀಠ

Saturday, February 5th, 2011 - - 3 Comments

ದಿನಾಂಕ ೨೭.೦೧.೨೦೧೧ ರಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರ ೮೦ನೇವರ್ಷದ ನಿಮಿತ್ತವಾಗಿ ವಿದ್ಯಾರ್ಥಿಸಂಘದ ವತಿಯಿಂದ ಗುರುವಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಆ ಪ್ರಯುಕ್ತ ೧೦ಲಕ್ಷ ಸಂಖ್ಯೆಯಲ್ಲಿ ಧನ್ವಂತರಿಜಪ, ೧ ಲಕ್ಷಸಂಖ್ಯೆಯಲ್ಲಿ ಧನ್ವಂತರಿವೈದಿಕಮಂತ್ರದ ಜಪ ಹಾಗೂ ೧೦೦೦ಸಂಖ್ಯೆಯಲ್ಲಿ ವಾಯುಸ್ತುತಿಪುನಶ್ಚರಣೆಯನ್ನೂ ಮಾಡಲಾಗಿತ್ತು. ಆ ಉದ್ದಿಶ್ಯವಾಗಿ ೮ ಕುಂಡಗಳಲ್ಲಿ ೧ಲಕ್ಷ ಸಂಖ್ಯೆಯಲ್ಲಿ ಧನ್ವಂತರಿಹೋಮ ಮತ್ತು ವಾಯುಸ್ತುತಿಪುನಶ್ಚರಣಹೋಮವನ್ನೂ ಮಾಡಲಾಯಿತು. ಶ್ರೀಗಳವರ ಸನ್ನಿಧಾನದಲ್ಲಿ ಹೋಮಗಳ ಪೂರ್ಣಾಹುತಿ ನಡೆಯಿತು. ಶ್ರೀಕೃಷ್ಣನಿಗೆ ೧೦೦೮ ಎಳನೀರಿನ ಅಭಿಷೇಕ ನಡೆಯಿತು. ಕೊನೆಯಲ್ಲಿ ಶ್ರೀಗಳಿಗೆ ಕಲಶಜಲಪ್ರೋಕ್ಷಣೆ ನಡೆಯಿತು. ಸಂಜೆ ಧಾರವಾಡಪೇಡಾ ಮತ್ತು ಅಕ್ಕಿಮುಡಿಯಿಂದ ಶ್ರೀಗಳವರಿಗೆ [...]

ಪುರಂದರೋತ್ಸವ – ಅಧೋನಿ ಪಾಂಡುರಂಗಾಶ್ರಮ

ಪುರಂದರೋತ್ಸವ – ಅಧೋನಿ ಪಾಂಡುರಂಗಾಶ್ರಮ

Friday, February 4th, 2011 - - 0 Comment

ದಿನಾಂಕ ೦೨.೦೧.೨೦೧೧ ರಂದು ಪುರಂದರದಾಸರ ಆರಾಧನಾ ಮಹೋತ್ಸವ. ಅಧೋನಿಯ ಓಮ್ ನಗರದಲ್ಲಿರುವ ಪುರಂದರಾಶ್ರಮದಲ್ಲಿ ಪುರಂದರದಾಸರ ಆರಾಧನಾಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ಬೆಳಗ್ಗೆ ಸುಮಾರು ೮.00ಘಂಟೆಯ ಹೊತ್ತಿಗೆ ತಮ್ಮ ಸಂಸ್ಥಾನಪೂಜೆಯನ್ನು ನೆರವೇರಿಸಿದರು. ತದನಂತರ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ನರವೇರಿತು. ಅಲ್ಲಿ ಅನೇಕ ವಿದ್ವಾಂಸರ ಪ್ರವಚನ ನಡೆಯಿತು. ತಮ್ಮ ಅಮೃತಹಸ್ತದಿಂದ ಪುರಂದರಾಶ್ರಮದ ನೂತನ ವೆಬ್ಸೈಟನ್ನು ಶ್ರೀಪಾದರು ಉದ್ಘಾಟಿಸಿದರು. ಕೊನಯಲ್ಲಿ ಶ್ರೀಗಳು ಪುರಂದರದಾಸರ ವಿಶೇಷತೆಗಳನ್ನು, ದಾಸಸಾಹಿತ್ಯದಲ್ಲಿ ಅವರ ಅಪಾರ ಸಾಧನೆಯನ್ನೂ ತಿಳಿಸಿದರು. ಭಗವದ್ಭಕ್ತರಿಗೆಲ್ಲಾ ಅನುಗ್ರಹ ಸಂದೇಶವನ್ನಿತ್ತರು. [...]

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ

Thursday, October 28th, 2010 - - 0 Comment

ದಿನಾಂಕ ೨೭.೧೦.೨೦೧೦ರಂದು ತಿರುಪತಿಯಲ್ಲಿ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ತಾವು ನಿರ್ಮಿಸಲು ಹೊರಟಿರುವ “ಉಡುಪಿಛತ್ರ”ದ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದರು. ಈ ಉಡುಪಿಛತ್ರವು ತಿರುಪತಿಬೆಟ್ಟದ ಕೆಳಭಾಗದಲ್ಲಿದ್ದು ಇದನ್ನು ಶ್ರೀಗಳು ತಮ್ಮ ರಾಮವಿಟ್ಠಲ ಟ್ರಸ್ಟ್ ವತಿಯಿಂದ ೧೬,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಿದ್ದಾರೆ. ಮಧ್ಯಾನ್ಹ ೧೨-೧೫ ಘಂಟೆಯ ಮಕರ ಲಗ್ನದಲ್ಲಿ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ಭೂಮಿಪೂಜೆ ಹಾಗೂ ಶಂಕುಸ್ಥಾಪನೆಯನ್ನು ನಡೆಸಿದರು. ತದನಂತರ ಭಕ್ತಾದಿಗಳಿಗೆ ರಾಘವೇಂದ್ರ ಮಠದಲ್ಲಿ ಶ್ರೀಗಳಿಂದ ತೀರ್ಥಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮಧ್ವಜಯಂತಿ, ವಿಜಯದಶಮಿ – ವಿಶೇಷ

ಮಧ್ವಜಯಂತಿ, ವಿಜಯದಶಮಿ – ವಿಶೇಷ

Thursday, October 21st, 2010 - - 0 Comment

17- Dec – 2011 ದಿನಾಂಕ ೧೭-೧೦-೨೦೧೦ರಂದು ಉಡುಪಿಯ ಶ್ರೀಕೃಷ್ಣನಿಗೆ ಪೂಜೆಯನ್ನು ಸಲ್ಲಿಸಿದ ಶ್ರೀಗಳು, ವಿಜಯದಶಮಿಯ ಪ್ರಯುಕ್ತ ಮಂಗಳೂರಿನ ಪ್ರದೀಪ್ ಕಲ್ಕೂರ ಇವರ ಮನೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಕ್ಕಳಿಗೆ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ವಿದ್ಯಾರಂಭವನ್ನು ಮಾಡಿಸಲಾಯಿತು. ವಿಜಯದಶಮಿಯಂದು ಅಕ್ಷರಾಭ್ಯಾಸ ಹಾಗೂ ಮಕ್ಕಳಿಗೆ ವಿದ್ಯಾರಂಭಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರದೀಪ್ ಕಲ್ಕೂರ ಇವರನ್ನು ಪ್ರಶಂಸಿಸಿದ ಶ್ರೀಗಳು ಎಲ್ಲರಿಗೂ ಫಲಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ಅದೇ ದಿನ ಮಧ್ವಜಯಂತಿ ಪ್ರಯುಕ್ತ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು  ಮಧ್ವಾಚಾರ್ಯರ ಹುಟ್ಟೂರಾದ ಪಾಜಕಕ್ಕೆ ಭೇಟಿ ನೀಡಿ ಅಲ್ಲಿ ಪುಸ್ತಕಪೂಜೆಯನ್ನು ಮಾಡಿದರು. [...]

ವಿಶ್ವಮಾನ್ಯ ತೀರ್ಥರ ಆರಾಧನೆ – ಕೋಟೇಶ್ವರ

ವಿಶ್ವಮಾನ್ಯ ತೀರ್ಥರ ಆರಾಧನೆ – ಕೋಟೇಶ್ವರ

Monday, October 11th, 2010 - - 1 Comment

11 Dec 2011 ದಿನಾಂಕ ೧೧-೧೦-೨೦೧೦ ರಂದು ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರ ಗುರುಗಳಾದ ಶ್ರೀಶ್ರೀವಿಶ್ವಮಾನ್ಯತೀರ್ಥ ಶ್ರೀಪಾದರ ಆರಾಧನೆ. ಆಪ್ರಯುಕ್ತ ಶ್ರೀಗಳು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿಕ್ಷೇತ್ರದ ಹರಿಹರೇಶ್ವರ ದೇವಾಲಯದ ಬಲಭಾಗದಲ್ಲಿರುವ ಮೇಲ್ಮಠದಲ್ಲಿ ಗುರುಗಳ ಆರಾಧನಾ ಮಹೋತ್ಸವವನ್ನು ನೆರವೇರಿಸಿದರು. ೦೯.೩೦ ಘಂಟೆಗೆ ಸರಿಯಾಗಿ ಶ್ರೀಕ್ಷೇತ್ರ ಕುಂಭಾಸಿಗೆ ಬಂದ ಶ್ರೀಗಳು ಅಲ್ಲಿನ ಹರಿಹರೇಶ್ವರ ದೇವಾಲಯಕ್ಕೆ ಬೇಟಿ ನೀಡಿ ಅಲ್ಲಿನ ದೇವರದರ್ಶನ ಪಡೆದರು. ನಂತರ ಆನೆಗುಡ್ಡೆಯ ಸಿದ್ಧಿವಿನಾಯ ದೇವಾಲಯಕ್ಕೆ ಬಂದ ಶ್ರೀಗಳು ಅಲ್ಲಿನ ದೇವರಿಗೆ ಆರತಿ ಬೆಳಗಿದರು. ಈ ಸಮಯದಲ್ಲಿ ಪೇಜಾವರ [...]

ಪಾದಯಾತ್ರೆಯ ಅಂತಿಮದಿನದ ವಿಶೇಷ

ಪಾದಯಾತ್ರೆಯ ಅಂತಿಮದಿನದ ವಿಶೇಷ

Friday, October 8th, 2010 - - 0 Comment

October 8th, 2010 ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು ಮಂಗಳೂರಿನ ಸುತ್ತಮುತ್ತ ನಡೆಸುತ್ತಿರುವ ಮೂರುದಿನಗಳ ಪಾದಯಾತ್ರೆಯ ಅಂತಿಮ ದಿನವಾದ ಇಂದು ಬೆಳಗ್ಗೆ ೦೯-೦೦ ಘಂಟೆಗೆ ಸರಿಯಾಗಿ ಕಂರ್ಬಿಸ್ಥಾನ ವೈದ್ಯನಾಥ ಮಹಾದ್ವಾರದಿಂದ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಗುರುನಾರಾಯಣ ಮಂದಿರ, ಕೋರ್ದಬು ದೇವಸ್ಥಾನ ಹೀಗೆ ಜೆಪ್ಪಿನಮೊಗರು ಗ್ರಾಮದ ಹಿಂದುಗಳ ಶ್ರದ್ಧಾಕೇಂದ್ರಗಳಿಗೆ ಭೇಟಿನೀಡಿ ಮುಖ್ಯರಸ್ತೆಯ ಬದಿಗಳಲ್ಲಿರುವ ಅನೇಕ ಮನೆಗಳಿಗೆ ಭೇಟಿನೀಡಿದರು. ನಂತರ ಅಳಪೆಯ ಪರಂಜ್ಯೊತಿ ಭಜನಾಮಂದಿರ, ಕರ್ಮಾರ್ ಗ್ರಾಮದ ಮಹಾದೇವಿ ಭಜನಾಮಂದಿರ, ಜಲ್ಲಿಗುಡ್ಡೆಯ ಅಂಭಾಭವಾನಿ ಭಜನಾಮಂದಿರಗಳಿಗೂ ಪಾದೆಯಾತ್ರೆಯ ಮೂಲಕ ಹೋಗಿ ಎಲ್ಲಾ ವರ್ಗದ ಹಿಂದುಗಳಿಗೂ [...]

ಎರಡನೇ ದಿನವೂ ಮುಂದುವರಿದ ಯಾತ್ರೆ

ಎರಡನೇ ದಿನವೂ ಮುಂದುವರಿದ ಯಾತ್ರೆ

Friday, October 8th, 2010 - - 0 Comment

07 Oct 2010 – ಮಂಗಳೂರಿನ ಸುತ್ತಮುತ್ತ ಮೂರುದಿನಗಳ ಪಾದಯಾತ್ರೆಯನ್ನು ಕೈಗೊಂಡಿರುವ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರು ಎರಡನೇ ದಿನವಾದ ಇಂದು ಬೆಳಗ್ಗೆ ೮.೦೦ಘಂಟೆಗೆ ಸರಿಯಾಗಿ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಮೊದಲಿಗೆ ಕಾಪಿಕಾಡ್ ನ ಉಮಾಪುರಿಯಲ್ಲಿರುವ ಉಮಾಮಹೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಂದ ಪಾಯಾತ್ರೆಯನ್ನು ಪ್ರಾರಂಭಿಸಿದ ಶ್ರೀಗಳು ಗಾಂಧೀನಗರದಲ್ಲಿ ಸಂಚರಿಸುತ್ತಾ, ಅಲ್ಲಿಯ ಹಿಂದೂಗಳ ಶ್ರದ್ಧಾಕೇಂದ್ರವಾದ ಸತ್ಯನಾರಾಯಣ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲಿಂದ ತೊಕ್ಕೊಟ್ಟು ಗ್ರಾಮದಲ್ಲಿರುವ ಗಣೇಶಮಂದಿರಕ್ಕೆ ಆಗಮಿಸಿದ ಶ್ರೀಗಳು ಮಾರ್ಗಮಧ್ಯೆ ಅನೇಕ ಮಹಿಳೆಯರಿಗೆ, ಮಕ್ಕಳಿಗೆ ಹಿಂದೂಸಮಾಜದ ಸರಳ ಸಂಕ್ಷಿಪ್ತದಿನಚರಿಯನ್ನೊಳಗೊಂಡ [...]

QR Code Business Card