ಗುರುವಂದನಾ ಸಮಾರಂಭ – ಪೂರ್ಣಪ್ರಜ್ಞ ವಿದ್ಯಾಪೀಠ
Saturday, February 5th, 2011 - Vishveshavani - 3 Commentsದಿನಾಂಕ ೨೭.೦೧.೨೦೧೧ ರಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರ ೮೦ನೇವರ್ಷದ ನಿಮಿತ್ತವಾಗಿ ವಿದ್ಯಾರ್ಥಿಸಂಘದ ವತಿಯಿಂದ ಗುರುವಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಆ ಪ್ರಯುಕ್ತ ೧೦ಲಕ್ಷ ಸಂಖ್ಯೆಯಲ್ಲಿ ಧನ್ವಂತರಿಜಪ, ೧ ಲಕ್ಷಸಂಖ್ಯೆಯಲ್ಲಿ ಧನ್ವಂತರಿವೈದಿಕಮಂತ್ರದ ಜಪ ಹಾಗೂ ೧೦೦೦ಸಂಖ್ಯೆಯಲ್ಲಿ ವಾಯುಸ್ತುತಿಪುನಶ್ಚರಣೆಯನ್ನೂ ಮಾಡಲಾಗಿತ್ತು. ಆ ಉದ್ದಿಶ್ಯವಾಗಿ ೮ ಕುಂಡಗಳಲ್ಲಿ ೧ಲಕ್ಷ ಸಂಖ್ಯೆಯಲ್ಲಿ ಧನ್ವಂತರಿಹೋಮ ಮತ್ತು ವಾಯುಸ್ತುತಿಪುನಶ್ಚರಣಹೋಮವನ್ನೂ ಮಾಡಲಾಯಿತು. ಶ್ರೀಗಳವರ ಸನ್ನಿಧಾನದಲ್ಲಿ ಹೋಮಗಳ ಪೂರ್ಣಾಹುತಿ ನಡೆಯಿತು. ಶ್ರೀಕೃಷ್ಣನಿಗೆ ೧೦೦೮ ಎಳನೀರಿನ ಅಭಿಷೇಕ ನಡೆಯಿತು. ಕೊನೆಯಲ್ಲಿ ಶ್ರೀಗಳಿಗೆ ಕಲಶಜಲಪ್ರೋಕ್ಷಣೆ ನಡೆಯಿತು. ಸಂಜೆ ಧಾರವಾಡಪೇಡಾ ಮತ್ತು ಅಕ್ಕಿಮುಡಿಯಿಂದ ಶ್ರೀಗಳವರಿಗೆ [...]











