Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Felicitation of Sri Vishwavallabhateetrha Swamiji

ದಿನಾಂಕ ೧೯.೧೧.೨೦೧೧ ಭಾವಿ ಪರ್ಯಾಯ ಪೀಠಾಧಿಪತಿಗಳಾದ, ಪರ್ಯಾಯ ಪೂರ್ವಭಾವೀ ಸಂಚಾರ ನಡೆಸುತ್ತಿರುವ ಶ್ರೀಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ವಿದ್ಯಾಪೀಠಕ್ಕೆ ಆಗಮಿಸಿದ್ದರು. ಶ್ರೀಗಳಿಗೆ ರಜತಪಲ್ಲಕ್ಕಿ, ಭಜನೆ, ಚೆಂಡೆ ವಾದನ, ವಾದ್ಯಗಳ ಜೊತೆ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ವಿದ್ಯಾಪೀಠದ ದೇವಸ್ಥಾನದಲ್ಲಿ ಶ್ರೀಪಾದರಿಗೆ ಪಾದಪೂಜೆ ನೆರವೇರಿತು.  ತದನಂತರ ಪೂರ್ಣಪ್ರಜ್ಞ ಸಭಾಗೃಹದಲ್ಲಿ ಸೋದೆ ಶ್ರೀಪಾದರಾದ ವಿಶ್ವವಲ್ಲಭತೀರ್ಥರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ವಿದ್ಯಾಪೀಠದ ಕುಲಪತಿಗಳಾದ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರೂ ಉಪಸ್ಥಿತರಿದ್ದರು. ಶೀಯುತ ರಾಮವಿಟ್ಠಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಯುತ ಸಿ.ಹೆಚ್.ಬದರಿಆಚಾರ್ಯರು ಸ್ವಾಗತ ಭಾಷಣವನ್ನು ಮಾಡಿದರು. ವಿದ್ಯಾಪೀಠದ ವತಿಯಿಂದ ಪೇಜಾವರಶ್ರೀಪಾದರು ಶ್ರೀವಿಶ್ವವಲ್ಲಭಶ್ರೀಗಳನ್ನು ಸನ್ಮಾನಿಸಿದರು. ಅತಿಚಿಕ್ಕ ವಯಸ್ಸಿನಲ್ಲಿ ಪರ್ಯಾಯವನ್ನು ನಡೆಸಲಿರುವ ವಿಶ್ವವಲ್ಲಭತೀರ್ಥರಿಗೆ ಪೇಜಾವರಶ್ರೀಪಾದರು ಹರಿಗುರುಗಳು ಅನುಗ್ರಹಿಸಲೆಂದು ಆಶೀರ್ವದಿಸಿದರು.

QR Code Business Card