Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

ಹಳೆವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ: ಕಾರ್ಕಳ

ದಿನಾಂಕ ೨೬.೧೧.೨೦೧೧ರಂದು ಕಾರ್ಕಳದ ಶ್ರೀರಾಘವೇಂದ್ರ ಮಠದಲ್ಲಿ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರ ೮೦ವರ್ಷದ ವರ್ಧಂತಿಯ ಪ್ರಯುಕ್ತ ಪೂರ್ಣಪ್ರಜ್ಞ ವಿದ್ಯಾಪೀಠದ ಹಳೆವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಶಿಷ್ಯರು ಗುರುಗಳ ದೀರ್ಘಾಯುಷ್ಯ ಹಾಗೂ ಆರೋಗ್ಯ ಪ್ರಾಪ್ತಿಗಾಗಿ ಮಹಾವಿಷ್ಣುಯಾಗವನ್ನು ನೆರವೇರಿಸಿದರು. ತದನಂತರ ಮಧ್ವಾಚಾರ್ಯ ಕರಾರ್ಚಿತ ರಾಮವಿಠ್ಠಲದೇವರ ಪೂಜೆ, ತೀರ್ಥಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪೇಜಾವರಶ್ರೀಗಳ ಶಿಷ್ಯರೇ ಆದ ಸುಬ್ರಹ್ಮಣ್ಯಮಠದ ಶ್ರೀವಿದ್ಯಾಪ್ರಸನ್ನತೀರ್ಥರೂ ಉಪಸ್ಥಿತರಿದ್ದರು. ಕೊನೆಯಲ್ಲಿ ಶಿಷ್ಯರು ಗುರುಗಳಿಗೆ ಫಲ-ಕಾಣಿಕೆಗಳನ್ನು ಸಮರ್ಪಿಸಿದರು. ಶ್ರೀಗಳು ಎಲ್ಲರಿಗೂ ಫಲಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

QR Code Business Card