Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

ಮಲ್ಕಾಜ್ ಗಿರಿಯಲ್ಲಿ ಶ್ರೀಗಳ ಶೋಭಾಯಾತ್ರೆ

ಹೈದ್ರಾಬಾದ್ ಹಾಗೂ ಸಿಕಂದರಾಬಾದ್ ಈ ಅವಳಿನಗರಗಳಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುತ್ತಿರುವ ಶ್ರೀಶ್ರೀವಿಶ್ವೇಶತೀರಥ ಶ್ರೀಪಾದರು ದಿನಾಂಕ o7-o8-2011ರಂದು ಮಲ್ಕಾಜ್ ಗಿರಿಯಲ್ಲಿರುವ ರಾಘವೇಂದ್ರ ಮಠದಲ್ಲಿ  ತಮ್ಮ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ಪೂಜಾನಂತರ ನೆರೆದಿದ್ದ ಭಕ್ತರನ್ನುದ್ದೇಶಿಸಿ ಅನುಗ್ರಹ ಭಾಷಣವನ್ನೂ ಮಾಡಿದರು. ಸಂಜೆ ೬ಘಂಟೆಗೆ ಮಲ್ಕಾಜ್ ಗಿರಿ ರಾಘವೇಂದ್ರ ಮಠದಿಂದ ಅಲ್ಲಿನ ಉತ್ತರಾದಿಮಠದ ವರೆಗೆ ಭವ್ಯವಾದ ಶೋಭಾಯಾತ್ರೆ ಜರುಗಿತು. ಉತ್ತರಾದಿಮಠದಲ್ಲಿ ಸಭೆ ನಡೆಯಿತು. ವೇದವ್ಯಾಸವಿದ್ಯಾಪೀಠದ ಪ್ರಾಚಾರ್ಯರಾದ ಶ್ರೀಪದ್ಮನಾಭಾಚಾರ್ ಚಿಟಗುಪ್ಪ ಅವರು ಸ್ವಾಗತಿಸಿದರು. ತದನಂತರ ಶ್ರೀಲಕ್ಷ್ಮೀನಾರಾಯಣಾಚಾರ್ಯ ಇವರು “ಉತ್ತಮಾಧಿಷ್ಠಾನಗಳಲ್ಲಿ ಭಗವಂತನ ಚಿಂತನೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡಿದರು. ನಂತರ ಶ್ರೀಗಳು ಭಾಗವತ ಪ್ರವಚನ ಮಾಡಿದರು ಅಲ್ಲದೆ ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶವನ್ನಿತ್ತರು.

QR Code Business Card