Question & Answer

There are 13 answers from Shri Vishwesha Teertha Swamiji

  1. Rameshchandra

    ನನ್ನ ಸ್ನೆಹಿತನು ಪ್ರತಿ ಸಂದರ್ಭದಲ್ಲಿ ಎಡವಿ ಬೀಳುತ್ತಾನೆ. ಸತ್ಯ, ಅಹಿಂಸೆ, ಪರಮಾತ್ಮ ಮೊದಲಾದುವನ್ನು ನಂಬಿದರೇನೇ ಹೀಗಾಗುತ್ತದೆಯೆಂದು ಆತನ ಪ್ರಕೃತ ವಾದ. ನಾನು ಆತನ ಅಚಲ ನಿರ್ಧಾರಕ್ಕೆ ಉತ್ತೇಜನ ಕೋಡುವ ಸನ್ನಿವೇಶ ಬಂದುನಿಂತಿದೆ. ಆ ಬಗ್ಗೆ ತಮ್ಮ ಭೋಧನೆ?

    Shri Vishwesha Teertha Swamiji's reply:

    ಶಿಲ್ಪಿಯು ಕಲ್ಲಿಗೆ ನೀಡುವ ಪ್ರತಿಯೊಂದು ಹೊಡೆತವೂ ಕಲ್ಲಿನಲ್ಲಿ ಸುಂದರವಾದ ಮೂರ್ತಿಯು ರೂಪುಗೊಳ್ಳಲು ಸಹಾಯಕವೇ ಆಗುವುದು. ಸಜ್ಜನರಿಗೆ ಭಗವಂತನು ನೀಡುವ ಆಘಾತಗಳೂ ಅವರ ವ್ಯಕ್ತಿತ್ವವನ್ನು ವಿಕಸಿತಗೊಳಿಸುವುವು. ಪರಮಾತ್ಮನ ಗೊತ್ತುಗುರಿಗಳನ್ನು ಅರಿಯದೆ ತಾತ್ಕಾಲಿಕ ಲಾಭ ನಷ್ಟಗಳ ಲೆಕ್ಕಾಚಾರದಿಂದ ಭಗವಂತನನ್ನು ಜರೆಯುವುದು ಉಚಿತವಲ್ಲ. ಚಿತ್ರವು ಪೂರ್ಣವಾಗುವ ಮೊದಲು ವಿಕೃತವಾಗಿ ತೋರುವುದೆಂದು ಕಲಾಕಾರರನ್ನು ದೊಷಿಸುವುದೇ?

  2. Praveen

    ಚಂದ್ರಮಂಡಳಕ್ಕೆ ಅಮೇರಿಕನ್ನರು ಹೋದ ಮೇಲೆ ಚಂದ್ರನನ್ನು ಎಂದಿನಂತೆ ಪೂಜಿಸಬೇಕೇ?

    Shri Vishwesha Teertha Swamiji's reply:

    ಚಂದ್ರಮಂಡಲವನ್ನು ಮುಟ್ಟಿದರೂ, ಚಂದ್ರನುನ್ನು ಮುಟ್ಟಿದಂತಾಗಲಿಲ್ಲ. ನಾವು ಭೂಮಿಯಲ್ಲಿದ್ದರೂ, ನಮಗೆ ಅಗೋಚರವಾದ ಭೂಮಂಡಲದ ಅಧಿಷ್ಠಾತ್ರಿಯಾದ ದೇವಿ ಭೂಮಾತೆಯನ್ನು ನಾವು ಪೂಜಿಸುವುದಿಲ್ಲವೇ?

  3. Manjunath

    ಮನುಷ್ಯನು ಈ ಜನ್ಮದಲ್ಲಿ ಎಷ್ಟೇ ಆಚರಣೆ ಶೀಲನಾಗಿದ್ದರೂ ದೇವರನ್ನೇ ಭಕ್ತಿ ಪುರಸ್ಸರವಾಗಿ ಪ್ರಾರ್ಥಿಸುತ್ತಿದ್ದರೂ ಹೋದ ಜನ್ಮದ ಫಲವಾಗಿ ಈ ಜನ್ಮದಲ್ಲಿ ಅನುಭೋಗಿಸ ಹಚ್ಚವುದು ಯೋಗ್ಯವೇ? ಮಗುವು ಶೈಶವಾವಸ್ಥೆಯಲ್ಲಿದ್ದಾಗ ತಾಯಿಯನ್ನು ಒದೆಯುವದು, ಬಡೆಯುವುದು ಮಾಡುತ್ತದೆ. ಅದೇ ಶಿಶು ಬೆಳೆದು ದೊಡ್ಡದಾದ ಮೇಲೆ ಆ ತಾಯಿಯು ಆ ಶಿಶುವಿನಲ್ಲಿ ಸೇಡು ತೀರಿಸಿಕೊಳ್ಳುವುದು ಸಮಂಜಸವೇ?

    Shri Vishwesha Teertha Swamiji's reply:

    ಭಗವಂತನು ನಮ್ಮ ಮೇಲೆ ಸೇಡು ತೀರಿಸುತ್ತಿಲ್ಲ. ಹಿಂದಿನ ದಿನದಲ್ಲಿ ನಮ್ಮಲ್ಲಿ ಅಂಟಿಕೊಂಡಿದ್ದ ಕೊಳೆಯನ್ನು ತಿಕ್ಕಿ ಸ್ವಚ್ಚಗೊಳಿಸುವ ತಾಯಿಯ ವಾತ್ಸಲ್ಯ ಧಾರೆಯನ್ನೇ ನಮ್ಮ ಕಡೆಗೆ ಹರಿಸುತ್ತಿದ್ದಾನೆ.

  4. Dinesh Bangera

    ಭಾರತವು ಮೂಢನಂಬಿಕೆಯ ಅನಾಗರಿಕ ದೇಶವೆನ್ನುವವರಿಗೆ ಏನುತ್ತರ ಹೇಳಬೇಕು?

    Shri Vishwesha Teertha Swamiji's reply:

    ಭಾರತದ ಪ್ರಾಚೀನ ಇತಿಹಾಸ ಹಾಗೂ ಸಾಹಿತ್ಯ ಗ್ರಂಥಗಳನ್ನು ಅಧ್ಯಯನ ಮಾಡಲು ಅವರಿಗೆ ಸೂಚಿಸುವುದು ಉಚಿತ.

  5. Shridevi HS, Mysore

    ಸುಖ-ದುಃಖಗಳು ಹಗಲು ಇರುಳಿನಂತೆ ಇರುವುದಿದ್ದರೆ ಓರ್ವನ ಜೀವನವು ಕಷ್ಟ ಇಲ್ಲವೇ ಸುಖದಲ್ಲಿಯೇ ಅಂತ್ಯಗೊಳ್ಳುತ್ತಿದೆಯಲ್ಲ?

    Shri Vishwesha Teertha Swamiji's reply:

    ದುಃಖದಲ್ಲಿ ಅಂತ್ಯಗೊಂಡ ದುರ್ಜನರ ಜೀವನವು ಹಗಲಿಲ್ಲದ ಇರುಳಾದರೆ ಸುಖಾಂತವಾದ ಸಜ್ಜನರ ಜೀವನವು ಇರುಳಿಲ್ಲದ ಹಗಲಾಗುವುದು.

  6. Pavan mairpady

    ಗುರುಗಳೇ ,
    ಸತ್ಯದ ಮಹಿಮೆಯನ್ನು ತಿಳಿಸಿಕೊಡುವಿರಾ

  7. suresh

    made snanavnnu kevala dhaarmika nabike endu heluthidiri.idu dhaarmika nambike alla.idu moodha nambike.idu kevala andhanukarane horatu mathenu alla.neevu heluva haage idu dhaarmika nambike aagiddare `sathi sahagamana’ padhati irabekithu.aaga adu ketta sampradayavaagithu.adannu raajamohanroyrantha dhimantha naayakaru nillisi mahan seve maadiddare.intha anishta padhtiyannu nillisi samajasudharanegagi prayatnisi.aa kaarya nimminda khanditavaagutade.shubhavaagali! hare vittala!hare krishna!

  8. ಸುರೇಶ

    ಮಡೆ ಸ್ನಾನದಂತ ಅನಿಷ್ಟ ಪಧ್ದತಿಯನ್ನು ನಿಲ್ಲಸಿ!

Ask Your Question:


QR Code Business Card