Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

“ವೃಕ್ಷಾರತಿ”

ಪೇಜಾವರ ಶ್ರೀಗಳ ವೃಕ್ಷರಕ್ಷ ವಿಶ್ವರಕ್ಷ ಯೋಜನೆಯ ಅಂಗವಾಗಿ ಉಡುಪಿಯ ಆಸುಪಾಸಿನ ದೇವಸ್ಥಾನಗಳಲ್ಲಿ ಭವಿಷ್ಯದಲ್ಲಿ ಧ್ವಜಮರಕ್ಕೆ ಬೇಕಾದ ಬೃಹತ್ ಮರಗಳ ಕೊರತೆಯಾಗಬಾರದೆಂಬ ಉದ್ದೇಶದಿಂದ ಸುಮಾರು 80 ದೇವಸ್ಥಾನಗಳ ಆವರಣದಲ್ಲಿ ತಲಾ ಎರಡರಂತೆ ಕಿರಾಲ್ ಬೋಗಿಯ ಸಸಿಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನಿಟ್ಟೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪುತ್ತೂರು ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಚಾಲನೆ ನೀಡಿದರು.
ದೇವರ ಮುಂಭಾಗದಲ್ಲಿ ಸಸಿಗಳನ್ನಿಟ್ಟು “ವೃಕ್ಷಾರತಿ” ಬೆಳಗಿದ ಬಳಿಕ ದೇವಳದ ಆವರಣದಲ್ಲಿ ಅವುಗಳನ್ನು ನೆಟ್ಟ ಶ್ರೀಗಳು ಅವುಗಳನ್ನು ಚೆನ್ನಾಗಿ ಪೋಷಿಸುವಂತೆ ಆಡಳಿತ ಮಂಡಳಿ ಮತ್ತು ಭಕ್ತರಿಗೆ ಸೂಚಿಸಿದರು.ನಿಟ್ಟೂರು ದೇವಳದಲ್ಲಿ ಆಡಳಿತ ಮಂಡಳಿಯ ಕರಂಬಳ್ಳಿ ಶಿವರಾಮಶೆಟ್ಟಿ ,ಮಹಾಬಲ ನಾಯ್ಕ,ರಮಾನಂದ ಕಾರಂತ,ರಶ್ಮಿತಾ ಶೆಟ್ಟಿ,ಬಾಲಕೃಷ್ಣ ಶೆಟ್ಟಿ , ಪ್ರಸಾದ್ ಶೆಟ್ಟಿ ಮೊದಲಾದವರು ಹಾಗೂ ಪುತ್ತೂರು ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಪಿ ರಾಮ ಭಟ್,ಪಿ ಎಚ್ ಭಟ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಮತ್ತು ಕೃಷ್ಣ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು.

QR Code Business Card